ಕೆಂಡಸಂಪಿಗೆ ಪುಸ್ತಕಗಳು
<  br>
ಕೆಂಡಸಂಪಿಗೆ

ಕೆಂಡಸಂಪಿಗೆ ಪುಸ್ತಕಗಳುಇನ್ನಷ್ಟು ಮಾಹಿತಿ…

ರಮೇಶ ಹೆಗಡೆ

ಸಾಹಿತ್ಯ, ಸಂಗೀತ, ಚದುರಂಗ, ಕೇರಮ್, ಚಿತ್ರಕಲೇಗಳಲ್ಲಿ ಆಸಕ್ತಿ.
ಹುಟ್ಟಿನಿಂದ ಬರುವ ವಂಶವಾಹಿ ಸಮಸ್ಯೆಯಾದ ಅಪರೂಪದ ಎಲುವಿನ ಕಾಯಿಲೆ (Ostiogenesis inperfectta)ಯ ಕಾರಣ ಕೆಲವು ಆಸಕ್ತಿ ಮತ್ತು ಸಾಧನೆಗೆ ಅಡ್ಡಿ. ಆದರೂ ೧೮ವರ್ಷಗಳವರೆಗೆ ಜಗತ್ತಿನ ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಬಲ್ಲವರಾಗಿದ್ದ ಅವರು ನಂತರ ನಾಲ್ಕು ಗೋಡೆಗಳ ನಡುವೆ ಬಂಧಿಯಾದರು. ಅತಿಯಾದ ಓದುವ ಹವ್ಯಾಸ ಹೊಂದಿದ್ದ ಅವರಿಗೆ ಆಗ ಮೂಡಿದ್ದೇ *ಕಾವ್ಯ/ಗದ್ಯ* ಪ್ರೇಮ. ಕವನ ಮತ್ತು ಕಿರು ಲೇಖನಗಳ ರಚನೆ. ಮೊದಲು ನಾಲ್ಕನೇ ಕ್ಲಾಸಿನ ತನಕ ಓದಿದರೂ ಸರಕಾರದ ಕೆಲವು ಕಾನೂನಿನ ತೊಡಕುಗಳಿಂದ ಅಧಿಕೃತ ಓದು ಮೊಟಕುಗೊಂಡಿತು. ನಂತರ ಅಕ್ಕನ/ಗೆಳೆಯರ ಪಠ್ಯಗಳ ಸಹಾಯದಿಂದ ಬಹುತೇಕ ಬಿ.ಎ.ತನಕದ‌ ಓದನ್ನು ಮನೆಯಲ್ಲೇ ಮುಗಿಸಿದರೂ ಅವರ ಅಧಿಕೃತ ಓದಿನ ಹಸಿವು ಇಂಗಿರಲಿಲ್ಲ. ಈ ನಡುವೆ ಹಲವು ಕವನ ಮತ್ತು ಹನಿಗವನಗಳ ಸಂಕಲನ ಕಾವ್ಯ ಚಿಗುರು,ಕವನ‌ ಸಂಕಲನ ಮನದಲ್ಲಿ ಮನೆಯ ಮಾಡಿ . . . ,ಮಕ್ಕಳ ಕವಿತೆಗಳಾದ ಚಿಣ್ಣ – ಚಿನ್ನಾಟ ಇತ್ಯಾದಿ ಪ್ರಕಟವಾಗಿದ್ದವು. ಹಿರಿಯ ಕವಿ/ಬರಹಗಾರರಾದ ಶ್ರೀಯುತ ರಾಜೀವ ಅಜ್ಜಿಬಳ,ಸುಬ್ರಾಯ ಮತ್ತೀಹಳ್ಳಿ,ಜಯಂತ್ ಕಾಯ್ಕಿಣಿ,ಶ್ರೀಧರ್ ಭದ್ರನ್,ನಾಗೇಶ ಹೆಗಡೆ,ನಿರಂಜನ್ ವಾನಳ್ಳಿ,ಸುಬ್ರಾಯ ಬಕ್ಕಳ,ಸುಬ್ರಾಯ ಚೊಕ್ಕಾಡಿ,ಶ್ರೀಧರ ಬಳಗಾರ . . . ಇತ್ಯಾದಿ ಹಲವು ಹಿರಿಯ ಕವಿಗಳ ಪ್ರೋತ್ಸಾಹ, ಆಶೀರ್ವಾದಗಳಿಂದ ಕಾವ್ಯ ಕನ್ನಿಕೆಯ ಜೊತೆಗೆ ಸರಸ ನಡೆಸುತ್ತಿದ್ದ ರಮೇಶ್ ಅವರಿಗೆ ಕರಾಮುವಿ ಮನೆಯಿಂದಲೇ ಕಲಾ ಪದವಿಗೆ ಓದುವ ಅವಕಾಶ ಕಲ್ಪಿಸಿತು. ಆದರೆ, ಕರಾಮುವಿಯಲ್ಲಿ ಕೆಲ ತಾಂತ್ರಿಕ ಕಾರಣಗಳಿಂದ ನಿಂತಾಗ ಎರಡು ವರ್ಷಗಳ ಕಲಾ ಪದವಿ ಓದಿ ರಮೇಶ್ ನಿಲ್ಲಿಸಿದರು. ಈಗ ಮುಂದಿನ‌ ಓದಿಗಾಗಿ ಚಿಂತನೆ. ಇದುವರೆಗೆ ೭ಕವನ ಸಂಕಲನ (ಕವಿತೆ,ಗಝಲ್,ಮಕ್ಕಳ ಕವನ,ಹೈಕು . . . ) ಗಳನ್ನು ಹೊರತಂದಿರುವ ಅವರ ಇನ್ನೂ ಕವಿತೆಗಳು ಹೊರ ಬರಬೇಕಾಗಿವೆ..

ಪ್ರಕಟಿತ ಸಂಕಲನ: ೧) ಕಾವ್ಯ ಚಿಗುರು,
೨) ಮನದಲ್ಲಿ ಮನೆಯ ಮಾಡಿ
೩) ಚಿಣ್ಣ – ಚಿನ್ನಾಟ,
೪) ನೋವಿನಲಿ ನವಿಲು ಗರಿ,
೫)ಕಿಟಕಿಯೊಳಗಿನ ಕಣ್ಣು
೬) ಖರ್ಚಾಗದ ಪದ್ಯಗಳು
೭) ಕಲರವ

Bank Account:
Ramesh Govinda Hegde
Account No.89043335298
KVGB Sirsi branch
IFSC Code: KVGB0009502

ರಮೇಶ್ ಹೆಗಡೆ ಅವರ ಫೋನ್ ನಂಬರ್ : +919036446328

Facebook Commentsಕವನತನಯ ವಿಶ್ವನಾಥ್

About the Admin :

ಕವನತನಯ ವಿಶ್ವನಾಥ್

ತವರು ಯಲ್ಲಾಪುರ (ಮಲೆನಾಡು!). ಇವತ್ತು ಇರುವುದು ಗೋಮಂತಕದ ಮಹಾಶೈಲ. ನಾಳೆ ಇನ್ನೆಲ್ಲಿ ಗೊತ್ತಿಲ್ಲ. ನಾನು ನನ್ನ ಮನಸ್ಸು ಎರಡೂ ಪಕ್ಕಾ ಅಲೆಮಾರಿ. ಸಾಧನೆ ಶೂನ್ಯ. ಈ ಸೈಟ್ ಅನ್ನು ಸ್ವತಃ ನಡೆಸುತ್ತಿದ್ದೇನೆ. Maintanance, Hosting ಇತ್ಯಾದಿ ಖರ್ಚುಗಳನ್ನು ನಿಭಾಯಿಸಲು ನೀವು ಮಾಡುವ ಯಾವುದೇ ಮೊತ್ತದ ಧನಸಹಾಯ ಬಹಳ ಉಪಕಾರಿಯಾಗುತ್ತದೆ. ಇಚ್ಛೆ ಇದ್ದಲ್ಲಿ ಕೆಳಗಿನ ಬಟನ್ ಒತ್ತಿ...