X

ಕೆಂಡಸಂಪಿಗೆ‬

ಕೆಂಬಾನು ಮುಸಿನಗಲು ಮುಸ್ಸಂಜೆ ಮುಸುಕಿಹುದು- ಮುಸಲ ಧಾರೆಯ ಬದಲು ಬಿಸಿಲ ಧಾರೆಯ ಸುರಿಸಿ!; ಮಸುಕಾಗಿಹುದು ಮನಸು- ಮಾಸಿದಾಗಸದಂತೇ; ಹುಸಿಮುನಿಸು ತೋರುವವಳೊಡನೆ ಇರದೇನೇ . ಈ ಒಂಟಿ ಸಂಜೆಯೆಂಬುದು…

ಕವನತನಯ

ಭಾರತಿ

ಮೂರ್ತರೂಪಳು ಆರ್ತರೆದೆಯಲಿ ಕೀರ್ತಿರೂಪಳು ಪೂರ್ತಿ ಜಗದಲಿ ಪ್ರಾರ್ಥಿಸಿದವಗೆ ಭರ್ತಿಫಲವನು ಸ್ವಾರ್ಥವಿಲ್ಲದೆ ನೀಡುವವಳು

ಕವನತನಯ

ಕೆಂಡಸಂಪಿಗೆ‬

ಕೆಂಡಸಂಪಿಗೆ ಘಮಲು -ಉಂಡ ತಂಪಿಗೆ ಅಮಲು ತುಂಡು ಚಂದ್ರಗೂ ಮರುಳು - ಕಂಡು ಓಡಿದ ಹಗಲು ದುಂಡುಕಂಗಳ ಹುಡುಗಿ ಮಂಡಿಯೂರಿದಳಿಲ್ಲಿ ಬಂಡೆಯಂತಹ ಮನವ ಬೆಂಡಾಗಿಸಿದಳಿಲ್ಲಿ.. . ‪#‎ಕೆಂಡಸಂಪಿಗೆ‬

ಕವನತನಯ

ಚುಂಬನ

ತುಂಬಿರುಳು ಚುಂಬನದ ಹಂಬಲವು ತುಂಬಿರಲು ಬೆಂಬಿಡದ ತುಟಿಬಂಧ ಹೊಂಬೆಳಗವರೆಗೂ ಕುಂಭದುಂಬುವ ಜೇನು ಚೆಂದುಟಿಗಳಲ್ಲಿ ಇಂಬು ಸಿಕ್ಕಿದೆ ಸುಖಕೆ ಎಳೆಬಾಹುಗಳಲಿ . ಕನಕನಖ ಕೆಣಕುತಿದೆ ಗೀಚುತಲಿ ಬೆನ್ನ ಕಣಕಣವೂ…

ಕವನತನಯ

ಮಲೆನಾಡು

ಘನಘನಿತ ಮೇಘ ಘೀಳಿಡುವ ಮಲೆಘಟ್ಟ ಖಗಮೃಗಗಳ್ನಗುವಾಗ ಮುಗುಳಾಗೊ ಗಿರಿಬೆಟ್ಟ ಕಲಕಲನೆ ಜಲಸೆಲೆಯು ಮೆಲುಹರಿವ ತಾಣ ತರುಸಿರಿಯು ಮೆರೆವ ಕಿರಿದಿರುಳ ಹಿರಿದಾಣ

ಕವನತನಯ

ಕೆಂಡಸಂಪಿಗೆ

ಅವಳಿ ಕನ್ನಡಿ ಅವಳ ಕಣ್ಣ ಜೋಡಿಜವಳಿಯಂಗಡಿ ಅವಳು ನಿಂತರೇ ಮೋಡಿಕವಳಗೆಂಪು ತುಟಿ ಅವಳುಲಿಯುವಳು ಮನಮೀಟಿಬಹಳ ನುಲಿವ ಕಟಿ, ಅವಳಿಗವಳೇ ಸರಿಸಾಟಿಕೆಂಡಸಂಪಿಗೆ. . . . . .…

ಕವನತನಯ

ನಾ ಕಾಣದ ಹಿಮಾಲಯ

ಹಿಮಧಾರೆ ಹರಿಹರಿದು ಧರೆಪೂರ ಬಿಳಿಸೀರೆರವಿರಾಯ ಗಿರಿಯೇರಿ ನಗೆಬೀರಿ ಮನಸೂರೆಥಳಥಳನೆ ಹೊಳೆಯುತಿದೆ ಬಿಳಿಶಿಖರ ಬಿಸಿಲಿಗೆತಿಳಿಗಾಳಿ ಬಳಿಸುಳಿದು ಕಚಗುಳಿಯು ದೇಹಕೆ.. . . . . ಕವನತನಯ ಸಖ್ಯಮೇಧ

ಕವನತನಯ

ಹ್ಯಾಪಿ ಫ್ರೆಂಡ್ ಶಿಪ್ ಡೇ

ನೋವೊಂದು ನವೆಯಾಗಿ ನವಚಿಂತೆ ಬಲಿತಿರಲುನೆವವಿರದೆ ಮನನಾವೆ ನೀರಿನಲಿ ಮಗುಚಿರಲು-ನವಿರಾಗಿ ಬಳಿಬಂದು "ನಾವಿರಲು ಹೆದರದಿರು"ಎಂದವರೇ ದೇವರು, ಭುವಿಯಲ್ಲಿ ಸ್ನೇಹಿತರು !.ಓ ಸ್ನೇಹಿತ ! ನೀ ನನ್ನ ಹಿತ!ಜೊತೆಯಲಿರು ಅನವರತ!

ಕವನತನಯ

ಕೆಂಡಸಂಪಿಗೆ

ಬಿಳಿಕೆನ್ನೆ, ಗುಳಿಚಿನ್ನೆ, ತಿಳಿನಗೆಯ ಮೊಗವನ್ನೆ-ಬಳಿನಿಂತು ಗಿಳಿಯಂತೆ ನೋಡುತಿಹೆ ನಿನ್ನೇ!ಇಳಿಬಿದ್ದ ಸುಳಿಗೂದಲೊಡತಿ, ಓ ಗೆಳತಿ!ಚಳಿಗಾಳಿ ಸೆಳೆಯುತಿದೆ ಬೆಚ್ಚಗಾಗಿಸು ಬಾ!.ಕುಳಿತು ಕಳೆಯುವ ಸಮಯ ಕೆಲ ಘಳಿಗೆ ಕಾಲ-ಅಳಿದ ಹಳೆನೆನಪುಗಳ ಮರುಕಳಿಸುವಾ…

ಕವನತನಯ

ಕೆಂಡಸಂಪಿಗೆ

ಮೌನದಮನಿ, ಮೃದುಲೆ ಆಕೆ,ಮನದ ಧಾಮವ ಮೆರೆಸುವಾಕೆ,ಕುಸುಮಗಂಧಿನಿ, ಮನವಿಹಾರಿಕೆ!ಹೃದಯಚುಂಬಿತ ಶಿಶಿರಚಂದ್ರಿಕೆ!.ಮದಿರೆಗಿಂತಲೂ ಮಧುವು ಮಧುರಅಧರದಾ ಮಧು ಸಿಗಲು ಸದರಎಂದೂ ಆರದ ಕಣ್ಣ ಚಂದಿರಕೆಂಡಸಂಪಿಗೆ ನಿತ್ಯ ಸುಂದರ ಕೆಂಡಸಂಪಿಗೆ. . .…

ಕವನತನಯ

ಈ websiteನಲ್ಲಿ cookies ಬಳಸಲಾಗುತ್ತದೆ.