X

ಸೀತವ್ವ ಬಸುರಿ….!!

ಪ್ರತಿಮಂದಿ ಊರಲ್ಲಿ ಆಡಿಕೊಂಬರುಸಂಜೆ-ಕೆಳಮನೆಯ ಸೀತವ್ವ ಎಂಬುವಳು ಬಂಜೆ!ಹರಕೆ, ಹಾರೈಕೆಗಳಿಗಾಗಿಲ್ಲ ಕೂಸು,ಆಲೈಸುವವರಾರು ಅವಳೊಡಲ ತ್ರಾಸು?!.ಆ ದಿನದ ಸುದ್ದಿಯದು-ಸೀತವ್ವ ಬಸುರಿ!ಊರೊಳಗೆ ಹರಡಿತ್ತು, ಪ್ರತಿ ಕಿವಿಯಲುಸುರಿ!ಅವರ ಲೆಕ್ಕದಲೀಗ ಕಣ್ದೆರೆದ ದೇವರು!ಸೀತವ್ವ ನೆಲದ…

ಕವನತನಯ

ಗುರುವೇ…

ಕಡಲದಡದಲಿ ಎಡೆಬಿಡದ ಮೊರೆತ,ಮೋಡದೊಡಲಲಿ ಕಡುಗುಡುಗಿನ ಕೆನೆತ,ಕಾಡಡವಿಯಲಿ ಕೂಡುವಾ ಹಕ್ಕಿಜೋಡಿಯ ಉಲಿತ,ಸುಡುಗಾಡಲಿ ಬಾಡುತಿಹ ಕುಡಿಹುಲ್ಲಿನ ನೆನೆತ-ನಿನ್ನ ಲಾಲಿಗೆ ಪಲ್ಲವಿ! ಗುರುವೇ!,ನಿನ್ನ ಕಾಲಿಗೆ ಸಲ್ಲಲಿ!.ಮಕರಂದ, ಮಧುಬಿಂದು, ಸಿಹಿನೀರತೊರೆ ಸಿಂಧು,ಬಿರಿದಿರುವ ಕಸ್ತೂರಿ,…

ಕವನತನಯ

ಕೆಂಡಸಂಪಿಗೆ

'ಮಧು' ಬೆರೆತ ಮೃದು ಅಧರಮದಭರಿತ ನಗೆ ಮಧುರಮುದವೀವ ಮೊಗಮಂದಾರಮಂದನಡೆ, ಮಾದಕತೆ ಮೈಪೂರ....................................................ಎದೆಕದವ ಮೊದಲು ತೆರೆ-ದಳಿದುಳಿದ ಪ್ರೀತಿಯನುಅದಲುಬದಲಾಗಿಸುತಹೃದಯ ಗೆದ್ದವಳಾಕೆ- ಕೆಂಡಸಂಪಿಗೆ !!

ಕವನತನಯ

ಕೆಂಡಸಂಪಿಗೆ

ವ್ಯಾಪ್ತಿಯಿಲ್ಲದ ಪ್ರೀತಿ ನಿನ್ನದುಪ್ರಾಪ್ತವಾಗಲು ತೃಪ್ತ ನಾನುಸುಪ್ತಗನಸಿನ ಆಪ್ತ ಹುಡುಗೀ..ಗುಪ್ತಮೋಹದ ಲಿಪ್ತ ನಾನು...( ನಿನ್ನ ಕಂಡು...)ಸಪ್ತಸರ ಸಂ-ಕ್ಷಿಪ್ತಗೊಂಡಿದೆಎದೆಯ ಸಂಪದ ಜಪ್ತಿಗೊಂಡಿದೆನೂರು ಭಾವವು ವ್ಯಕ್ತವಾಗಿದೆವಿರಹಬಾಧೆಯು ಮುಕ್ತಿ ಕಂಡಿದೆ.

ಕವನತನಯ

ಮಲೆನಾಡು

ಹಸಿರು ಹುಲ್ಲಿನ ರತ್ನಗಂಬಳಿ, ಬಸಿರು ತುಂಬಿದಮರಗಳೋಕುಳಿಕೆಸರು ನೀರಲಿ ಕಮಲಗಳ ಬಳಿ- ಕೊಸರುತಿಹದುಂಬಿಗಳ ಹಾವಳಿಉಸಿರು ನೀಡುವ ಚಿಗುರು ತರುತಳಿ, ಹೆಸರು ಇಲ್ಲದಹಕ್ಕಿ ಮರದಲಿಆಸರೆಯ ಜೊತೆ ಬಿಳಲ ಕಳಕಳಿ ,…

ಕವನತನಯ

ಕೆಂಡಸಂಪಿಗೆ

ಮರಿಗರುವಿನಂಥವಳು ಮರುಬಿರಿದ ತುಟಿಯವಳು ಮಿರುಮಿರುಗೊ ಮುಖದವಳು ಮಾರಳತೆ ಜಡೆಯವಳು ಮೋರೆ ತೋರುತ ನಕ್ಕು ಮರೆಗೆ ಸರಿದಳು ಯುವತಿ ಮೊರೆಕರೆದರಾಲಿಸದ ಮರೆಯಲಾಗದ ಗೆಳತಿ . ‪#‎ಕೆಂಡಸಂಪಿಗೆ‬ . .…

ಕವನತನಯ

ಮಲೆನಾಡು

ಸುರಗಿ ಸಂಪಿಗೆ ಮಲ್ಲಿ, ನೂರು ಹೂಗಳ ಬಳ್ಳಿ ಪಾರಿಜಾತವು ಚೆಲ್ಲಿ ವನಕೆವನವೇ ಬೆಳ್ಳಿ! ಮಲೆನಾಡ ಕಡುಗಾಡಲ್ಲಿ ಇಬ್ಬನಿಯ ರಂಗವಲ್ಲಿ ಗಿಳಿ ಗುಬ್ಬಿ ಜೊತೆ ಮಿಂಚುಳ್ಳಿ, ಹಕ್ಕಿಗಳ ರಾಗವಲ್ಲಿ…

ಕವನತನಯ

ಚೆಲುವೆ…

ಬಟ್ಟಲಿನ ಕಣ್ಣುಗಳು ,ಬೆಟ್ಟದಾ ಪರಿ ಚೆಲುವು ಪುಟ್ಟ ಸಿಂಧೂರ ತಲೆ-ಮಟ್ಟಕ್ಕೆ ಸೆರಗು ಪಟ್ಟದಾ ರಾಣಿಯಂತಿಟ್ಟಿರುವ ಮೂಗುತಿಯು ಗುಟ್ಟಾದ ಮುಖಕಮಲ ರಟ್ಟಾದ ವೇಳೆಯಲಿ,,, ಮೋಹಕ ಚೆಲುವೆಯಾಕೆ,ಮಾಯಕದ ಶಿಲಾಬಾಲಿಕೆ ನಾನೊಬ್ಬ…

ಕವನತನಯ

ಕೆಂಡಸಂಪಿಗೆ

ಸುರಹೊನ್ನೆ ಮರವನ್ನೆ ಕೇಳಿದೆನು ನಾ ನಿನ್ನೆ- ಕೆಂಡಸಂಪಿಗೆಯಂತೆ ಹೆಚ್ಚು ತಂಪು! ಗಂಧದಾ ಮರ ಕೂಡ ಅಂದಿತ್ತು ಚಂದದಲಿ- "ಕೆಂಡಸಂಪಿಗೆಗೇನೆ ಹೆಚ್ಚು ಕಂಪು"!! ‪#‎ಕೆಂಡಸಂಪಿಗೆ‬ . . .…

ಕವನತನಯ

ಕೂಸಿನ ಕುರಿತು

ಜಗದಗಲ ಮೆರೆವಂತ ಮುಖಕಮಲ ನಿನ್ನದು ಅತಿಮೃದುಲ ಕಣ್ಣುಗಳು, ಕಿಲಕಿಲನೆ ನಗುವವಳು ಹೊಂಗೂದಲದು ಚೆನ್ನ, ನಗೆಗೆ ಸಾವಿರ ಬಣ್ಣ ಎತ್ತಿಕೊಳುವಾಸೆ, ಮುಗ್ಧ ಅಂದದ ಕೂಸೇ..

ಕವನತನಯ

ಈ websiteನಲ್ಲಿ cookies ಬಳಸಲಾಗುತ್ತದೆ.