ಕೆಂಡಸಂಪಿಗೆ
'ಮಧು' ಬೆರೆತ ಮೃದು ಅಧರಮದಭರಿತ ನಗೆ ಮಧುರಮುದವೀವ ಮೊಗಮಂದಾರಮಂದನಡೆ, ಮಾದಕತೆ ಮೈಪೂರ....................................................ಎದೆಕದವ ಮೊದಲು ತೆರೆ-ದಳಿದುಳಿದ ಪ್ರೀತಿಯನುಅದಲುಬದಲಾಗಿಸುತಹೃದಯ ಗೆದ್ದವಳಾಕೆ- ಕೆಂಡಸಂಪಿಗೆ !!
'ಮಧು' ಬೆರೆತ ಮೃದು ಅಧರಮದಭರಿತ ನಗೆ ಮಧುರಮುದವೀವ ಮೊಗಮಂದಾರಮಂದನಡೆ, ಮಾದಕತೆ ಮೈಪೂರ....................................................ಎದೆಕದವ ಮೊದಲು ತೆರೆ-ದಳಿದುಳಿದ ಪ್ರೀತಿಯನುಅದಲುಬದಲಾಗಿಸುತಹೃದಯ ಗೆದ್ದವಳಾಕೆ- ಕೆಂಡಸಂಪಿಗೆ !!
ವ್ಯಾಪ್ತಿಯಿಲ್ಲದ ಪ್ರೀತಿ ನಿನ್ನದುಪ್ರಾಪ್ತವಾಗಲು ತೃಪ್ತ ನಾನುಸುಪ್ತಗನಸಿನ ಆಪ್ತ ಹುಡುಗೀ..ಗುಪ್ತಮೋಹದ ಲಿಪ್ತ ನಾನು...( ನಿನ್ನ ಕಂಡು...)ಸಪ್ತಸರ ಸಂ-ಕ್ಷಿಪ್ತಗೊಂಡಿದೆಎದೆಯ ಸಂಪದ ಜಪ್ತಿಗೊಂಡಿದೆನೂರು ಭಾವವು ವ್ಯಕ್ತವಾಗಿದೆವಿರಹಬಾಧೆಯು ಮುಕ್ತಿ ಕಂಡಿದೆ.
ಮರಿಗರುವಿನಂಥವಳು ಮರುಬಿರಿದ ತುಟಿಯವಳು ಮಿರುಮಿರುಗೊ ಮುಖದವಳು ಮಾರಳತೆ ಜಡೆಯವಳು ಮೋರೆ ತೋರುತ ನಕ್ಕು ಮರೆಗೆ ಸರಿದಳು ಯುವತಿ ಮೊರೆಕರೆದರಾಲಿಸದ ಮರೆಯಲಾಗದ ಗೆಳತಿ . #ಕೆಂಡಸಂಪಿಗೆ . .…
ಬಟ್ಟಲಿನ ಕಣ್ಣುಗಳು ,ಬೆಟ್ಟದಾ ಪರಿ ಚೆಲುವು ಪುಟ್ಟ ಸಿಂಧೂರ ತಲೆ-ಮಟ್ಟಕ್ಕೆ ಸೆರಗು ಪಟ್ಟದಾ ರಾಣಿಯಂತಿಟ್ಟಿರುವ ಮೂಗುತಿಯು ಗುಟ್ಟಾದ ಮುಖಕಮಲ ರಟ್ಟಾದ ವೇಳೆಯಲಿ,,, ಮೋಹಕ ಚೆಲುವೆಯಾಕೆ,ಮಾಯಕದ ಶಿಲಾಬಾಲಿಕೆ ನಾನೊಬ್ಬ…
ಸುರಹೊನ್ನೆ ಮರವನ್ನೆ ಕೇಳಿದೆನು ನಾ ನಿನ್ನೆ- ಕೆಂಡಸಂಪಿಗೆಯಂತೆ ಹೆಚ್ಚು ತಂಪು! ಗಂಧದಾ ಮರ ಕೂಡ ಅಂದಿತ್ತು ಚಂದದಲಿ- "ಕೆಂಡಸಂಪಿಗೆಗೇನೆ ಹೆಚ್ಚು ಕಂಪು"!! #ಕೆಂಡಸಂಪಿಗೆ . . .…
ಹೆಜ್ಜೇನ ಮೈಬಣ್ಣ ಮಜ್ಜನದ ಮೈಕಾಂತಿ ಲಜ್ಜೆ ತುಂಬಿದ ನೋಟ ಹೆಜ್ಜೆ ನವಿಲಿನ ಆಟ ಸಜ್ಜುಗೊಂಡಿಹ ಮೊಗವು ಹೆಜ್ಜಾಲ ಮುಂಗುರುಳು ಕಜ್ಜಾಯದಂಥ ತುಟಿ ಸಜ್ಜೆಮನೆ ಹುಡುಗಿಗೆ...
ಬೆಳಕು ಹೀರಿದ ಹುಡುಗಿ, ಬಡಗಿ ಕೆತ್ತಿದ ಬೆಡಗಿತುಳುಕಿ ಚೆಲ್ಲುವ ಹೆರಳು, ಬಳುಕಿ ನುಲಿಯುವ ಬೆರಳುತಳುಕು ಹಾಕುವ ಪಾದ, ಘಿಲಕು ಗೆಜ್ಜೆಯ ನಾದಪುಳಕ ಬೀರುವ ದೃಷ್ಟಿ, ಚಳಕ ನಿನ್ನಯ…
ನೀನೊಂದು ಸಾಹಿತ್ಯ, ನನ್ನೆದೆಯ ಲಾಲಿತ್ಯ ಅತಿಮಧುರ ಸಾಂಗತ್ಯ, ಈ ಪ್ರೀತಿ ಸಿಹಿಸತ್ಯ ಬೆರಳುಗಳ ದಾಂಪತ್ಯ, ನಡೆಸೋಣ ಪ್ರತಿನಿತ್ಯ ನೀ ಬದುಕಿನಾಗತ್ಯ, ಈ ಬಂಧವೇ ಅಂತ್ಯ . ನಿನ್ನ ಕಂಗಳ…
ಕನ್ನಹಾಕುವ ಕಣ್ಣಸನ್ನೆಯುಖಿನ್ನಗೊಳಿಸುವ ಕೆನ್ನೆಬಣ್ಣವುಬೆನ್ನಮೇಲ್ಗಡೆ ಚಿನ್ನದಾ ಜಡೆಹೊನ್ನತೇಜದ ನಗುವ ಮುನ್ನಡೆ....ಮೆಲ್ಲನಾಚಿದೆ ಬೆಳ್ಳಗಲ್ಲವುಎಲ್ಲನೋಟದ ಕಳ್ಳಬಿಂದುವುಎಲ್ಲೆ ಮೀರದ ಚೆಲ್ಲುಮಾತಿಗೆಕಲ್ಲು ಹೃದಯವೂ ಹಲ್ಲೆಗೊಂಡಿದೆ... ಕೆಂಡಸಂಪಿಗೆ. . . . . . .…
ಕೆನ್ನೆ ಕಿತ್ತಳೆ, ಕತ್ತು ಬೆತ್ತಲೆಮುಖವು ನೈದಿಲೆ, ಒಮ್ಮೆ ಮುಟ್ಟಲೆ?'ನತ್ತು' ನಕ್ಕರೆ ಹೊಳೆವಳವಳೇಅಧರ ಅದುರಿರೆ ಮುತ್ತಿನಾಹೊಳೆ...ಹತ್ತುಸುತ್ತಿನ ಒತ್ತು ಜಡೆಯುಗತ್ತು ತುಂಬಿಹ ಸುತ್ತು ನಡೆಯುಒತ್ತಿ ತೀಡಿದ ಅಚ್ಚ ಕಾಡಿಗೆಅತ್ತರಿನ ಘಮ…
ಈ websiteನಲ್ಲಿ cookies ಬಳಸಲಾಗುತ್ತದೆ.