ಕವನ
"ಕವನ"ಅವಳು ನೆನಪಾಗಿಬದಲಾದಾಗಉಳಿದ ಅವಶೇಷವೇಕವನ... . . . . ಸಖ್ಯಮೇಧ
"ಕವನ"ಅವಳು ನೆನಪಾಗಿಬದಲಾದಾಗಉಳಿದ ಅವಶೇಷವೇಕವನ... . . . . ಸಖ್ಯಮೇಧ
"ನಿನ್ನ ಕಂಗಳೆರಡು ಕಾವ್ಯಗಳು!"ಅವನು ಬಾಯ್ತುಂಬ ಹೊಗಳಿದಾಗಸಂತಸವಾದಂತೆ ನಟಿಸಿದಳು...ಇರುಳ ತುಂಬ ನಿದ್ದೆಗೆಟ್ಟುಅವನ ಬರವು ಕಾಯುತ್ತಿದ್ದ ಕಂಗಳುಸತ್ಯ ಹೇಳುತ್ತಿದ್ದವು.... . . . . ಸಖ್ಯಮೇಧ
ಕೆಂಡಸಂಪಿಗೆ ನಕ್ಕುಹಾಲ್ಗಡಲು ಹರಿದಿಹುದು!ಬೆರೆತಿಹುದು ಕೇಸರಿಯೂಅವಳ ಘಮದಿಂದ..!.ನಾಜೂಕು ಜೋಕೊಂದಅವಳಿಗುಸುರುವ ತನಕಕೆಂಡಸಂಪಿಗೆ ಕಣ್ಣುಕಾಮನಾ ಬಿಲ್ಲು..!.ನನ್ನನ್ನು ತಾ ನಗಿಸಿಒಳಗೊಳಗೆ ತಾ ನಗುವಅವಳ ಹಾಲ್ಗೆನ್ನೆಯಲಿರಂಗು ರಂಗೋಲಿ .!!.ಕಡಲೊಳಗೆ ಇಹುದಂತೆಹವಳ ಮುತ್ತಿನ ರಾಶಿಅವಳೂನು ಕಡಲೇನೆ!ಸಂತಸದ…
ಅವನ ಕಂಗಳ ಶರಧಿಯಲ್ಲಿಅವಳು ಮುಳುಗೇಳುತ್ತಾಳೆ...ಅವಳ ಕಂಗಳ ಶರಧಿಯ ವಿಸ್ತಾರ ಕಂಡುಅವನು ಬೆರಗಾಗುತ್ತಾನೆ...ಅವನು 'ಅವಳೇ ಕಾವ್ಯ ' ಎನ್ನುತ್ತಾನೆ...ಅವಳು 'ಅವನುಸಿರಿನಲಿ ಕಾವ್ಯ ಹುಟ್ಟಿತು' ಎನ್ನುತ್ತಾಳೆ...ಅವನ ಬಾಳಿಗೆ ಅವಳ ಕಂಗಳ…
ಬಿಸಿಲಲ್ಲಿ ಹೊಳೆಹೊಳೆವಎಲೆತುದಿಯ ಹನಿಯಂತೆಚಿಗುರೆಲೆಯ ಕಂಗಳಲಿನಗುವಳಾಕೆ..!ಮೇಘರಾಶಿಯ ನಡುವೆಇಣುಕುವಾ ರವಿಯಂತೆಓರೆನೋಟವ ಬೀರಿನೋಡುವಾಕೆ..!. . . . . ಸಖ್ಯಮೇಧ
ನೆನಪುಗಳ ಹಾರಪೋಣಿಸುತ್ತಿದ್ದವಳಿಗೆಮುತ್ತುಗಳು ಸಾಲದೇ ಹೋದವು....ತಡಕಾಡಿದಳು-ಅವನ ಕಂಗಳಲ್ಲಿ..!!. . . . ಸಖ್ಯಮೇಧ
ನೆನಪುಗಳೆಂಬ ಕೊಪ್ಪರಿಗೆಗಳಲ್ಲಿತುಂಬಿರುವ ಸವಿಕ್ಷಣಗಳೆಂಬಅಗಾಧ ಸಂಪತ್ತುಗಳುಎಂದಿಗೂಹೊತ್ತಿನ ಹಸಿವನ್ನೂನೀಗಲಾರವು..! ಭಾವಕ್ಕಿಲ್ಲ_ಬೆಲೆ
ಗಾಢಗಂಧದ ಮಗಳು ಈ ಕೆಂಡಸಂಪಿಗೆ...ಬೆಳದಿಂಗಳಾ ಕುವರ ಆ ಚಂದ್ರಮ...ಪಂಚವರ್ಣದ ಕೂಸು ನರ್ತಿಸುವ ನವಿಲು...ಮುಗ್ಧಪ್ರೀತಿಯ ಕುವರಿ ಆಕೆ ನನ್ನಾಕೆ...!. . . . . . . .…
"ನಗುವಾ ನಲಿವಾ ಓ ಕೆಂಡಸಂಪಿಗೆ ...ನನಗೆ ಹದಿನೆಂಟು, ನಿನಗೆಷ್ಟೇ ಪ್ರಾಯ..?"."ಹೇಳುವೆನು ಕೇಳು ಓ ಪ್ರಿಯತಮ...ಹೂವಿಗೊಂದು ದಿವಸ; ಕಂಪಿಗೆ ಸಹಸ್ರಮಾನ...!". . . . ಸಖ್ಯಮೇಧ
ರಾತ್ರಿ ಕನಸಲಿ ಬಂದ ಕೆಂಡಸಂಪಿಗೆಯಪರಿಮಳ ಬೆಳಿಗ್ಗೆಯೂ ಸೂಸುವುದು....ರಾತ್ರಿ ಕನಸಲಿ ಬರುವ ನನ್ನಾಕೆಬೆಳಿಗ್ಗೆ ಮನಸಲಿ ಕಚಗುಳಿ ಇಡುವಳು..... . . . . . . . .…
ಈ websiteನಲ್ಲಿ cookies ಬಳಸಲಾಗುತ್ತದೆ.