ಮಲೆನಾಡು
ಘನಘನಿತ ಮೇಘ ಘೀಳಿಡುವ ಮಲೆಘಟ್ಟ ಖಗಮೃಗಗಳ್ನಗುವಾಗ ಮುಗುಳಾಗೊ ಗಿರಿಬೆಟ್ಟ ಕಲಕಲನೆ ಜಲಸೆಲೆಯು ಮೆಲುಹರಿವ ತಾಣ ತರುಸಿರಿಯು ಮೆರೆವ ಕಿರಿದಿರುಳ ಹಿರಿದಾಣ
ಘನಘನಿತ ಮೇಘ ಘೀಳಿಡುವ ಮಲೆಘಟ್ಟ ಖಗಮೃಗಗಳ್ನಗುವಾಗ ಮುಗುಳಾಗೊ ಗಿರಿಬೆಟ್ಟ ಕಲಕಲನೆ ಜಲಸೆಲೆಯು ಮೆಲುಹರಿವ ತಾಣ ತರುಸಿರಿಯು ಮೆರೆವ ಕಿರಿದಿರುಳ ಹಿರಿದಾಣ
ಹಿಮಧಾರೆ ಹರಿಹರಿದು ಧರೆಪೂರ ಬಿಳಿಸೀರೆರವಿರಾಯ ಗಿರಿಯೇರಿ ನಗೆಬೀರಿ ಮನಸೂರೆಥಳಥಳನೆ ಹೊಳೆಯುತಿದೆ ಬಿಳಿಶಿಖರ ಬಿಸಿಲಿಗೆತಿಳಿಗಾಳಿ ಬಳಿಸುಳಿದು ಕಚಗುಳಿಯು ದೇಹಕೆ.. . . . . ಕವನತನಯ ಸಖ್ಯಮೇಧ
ಅವಳಿ ಕನ್ನಡಿ ಅವಳ ಕಣ್ಣ ಜೋಡಿಜವಳಿಯಂಗಡಿ ಅವಳು ನಿಂತರೇ ಮೋಡಿಕವಳಗೆಂಪು ತುಟಿ ಅವಳುಲಿಯುವಳು ಮನಮೀಟಿಬಹಳ ನುಲಿವ ಕಟಿ, ಅವಳಿಗವಳೇ ಸರಿಸಾಟಿಕೆಂಡಸಂಪಿಗೆ. . . . . .…
ನೋವೊಂದು ನವೆಯಾಗಿ ನವಚಿಂತೆ ಬಲಿತಿರಲುನೆವವಿರದೆ ಮನನಾವೆ ನೀರಿನಲಿ ಮಗುಚಿರಲು-ನವಿರಾಗಿ ಬಳಿಬಂದು "ನಾವಿರಲು ಹೆದರದಿರು"ಎಂದವರೇ ದೇವರು, ಭುವಿಯಲ್ಲಿ ಸ್ನೇಹಿತರು !.ಓ ಸ್ನೇಹಿತ ! ನೀ ನನ್ನ ಹಿತ!ಜೊತೆಯಲಿರು ಅನವರತ!
ಬಿಳಿಕೆನ್ನೆ, ಗುಳಿಚಿನ್ನೆ, ತಿಳಿನಗೆಯ ಮೊಗವನ್ನೆ-ಬಳಿನಿಂತು ಗಿಳಿಯಂತೆ ನೋಡುತಿಹೆ ನಿನ್ನೇ!ಇಳಿಬಿದ್ದ ಸುಳಿಗೂದಲೊಡತಿ, ಓ ಗೆಳತಿ!ಚಳಿಗಾಳಿ ಸೆಳೆಯುತಿದೆ ಬೆಚ್ಚಗಾಗಿಸು ಬಾ!.ಕುಳಿತು ಕಳೆಯುವ ಸಮಯ ಕೆಲ ಘಳಿಗೆ ಕಾಲ-ಅಳಿದ ಹಳೆನೆನಪುಗಳ ಮರುಕಳಿಸುವಾ…
ಪ್ರತಿಮಂದಿ ಊರಲ್ಲಿ ಆಡಿಕೊಂಬರುಸಂಜೆ-ಕೆಳಮನೆಯ ಸೀತವ್ವ ಎಂಬುವಳು ಬಂಜೆ!ಹರಕೆ, ಹಾರೈಕೆಗಳಿಗಾಗಿಲ್ಲ ಕೂಸು,ಆಲೈಸುವವರಾರು ಅವಳೊಡಲ ತ್ರಾಸು?!.ಆ ದಿನದ ಸುದ್ದಿಯದು-ಸೀತವ್ವ ಬಸುರಿ!ಊರೊಳಗೆ ಹರಡಿತ್ತು, ಪ್ರತಿ ಕಿವಿಯಲುಸುರಿ!ಅವರ ಲೆಕ್ಕದಲೀಗ ಕಣ್ದೆರೆದ ದೇವರು!ಸೀತವ್ವ ನೆಲದ…
ಮೌನದಮನಿ, ಮೃದುಲೆ ಆಕೆ,ಮನದ ಧಾಮವ ಮೆರೆಸುವಾಕೆ,ಕುಸುಮಗಂಧಿನಿ, ಮನವಿಹಾರಿಕೆ!ಹೃದಯಚುಂಬಿತ ಶಿಶಿರಚಂದ್ರಿಕೆ!.ಮದಿರೆಗಿಂತಲೂ ಮಧುವು ಮಧುರಅಧರದಾ ಮಧು ಸಿಗಲು ಸದರಎಂದೂ ಆರದ ಕಣ್ಣ ಚಂದಿರಕೆಂಡಸಂಪಿಗೆ ನಿತ್ಯ ಸುಂದರ ಕೆಂಡಸಂಪಿಗೆ. . .…
ಕಡಲದಡದಲಿ ಎಡೆಬಿಡದ ಮೊರೆತ,ಮೋಡದೊಡಲಲಿ ಕಡುಗುಡುಗಿನ ಕೆನೆತ,ಕಾಡಡವಿಯಲಿ ಕೂಡುವಾ ಹಕ್ಕಿಜೋಡಿಯ ಉಲಿತ,ಸುಡುಗಾಡಲಿ ಬಾಡುತಿಹ ಕುಡಿಹುಲ್ಲಿನ ನೆನೆತ-ನಿನ್ನ ಲಾಲಿಗೆ ಪಲ್ಲವಿ! ಗುರುವೇ!,ನಿನ್ನ ಕಾಲಿಗೆ ಸಲ್ಲಲಿ!.ಮಕರಂದ, ಮಧುಬಿಂದು, ಸಿಹಿನೀರತೊರೆ ಸಿಂಧು,ಬಿರಿದಿರುವ ಕಸ್ತೂರಿ,…
'ಮಧು' ಬೆರೆತ ಮೃದು ಅಧರಮದಭರಿತ ನಗೆ ಮಧುರಮುದವೀವ ಮೊಗಮಂದಾರಮಂದನಡೆ, ಮಾದಕತೆ ಮೈಪೂರ....................................................ಎದೆಕದವ ಮೊದಲು ತೆರೆ-ದಳಿದುಳಿದ ಪ್ರೀತಿಯನುಅದಲುಬದಲಾಗಿಸುತಹೃದಯ ಗೆದ್ದವಳಾಕೆ- ಕೆಂಡಸಂಪಿಗೆ !!
ವ್ಯಾಪ್ತಿಯಿಲ್ಲದ ಪ್ರೀತಿ ನಿನ್ನದುಪ್ರಾಪ್ತವಾಗಲು ತೃಪ್ತ ನಾನುಸುಪ್ತಗನಸಿನ ಆಪ್ತ ಹುಡುಗೀ..ಗುಪ್ತಮೋಹದ ಲಿಪ್ತ ನಾನು...( ನಿನ್ನ ಕಂಡು...)ಸಪ್ತಸರ ಸಂ-ಕ್ಷಿಪ್ತಗೊಂಡಿದೆಎದೆಯ ಸಂಪದ ಜಪ್ತಿಗೊಂಡಿದೆನೂರು ಭಾವವು ವ್ಯಕ್ತವಾಗಿದೆವಿರಹಬಾಧೆಯು ಮುಕ್ತಿ ಕಂಡಿದೆ.
ಈ websiteನಲ್ಲಿ cookies ಬಳಸಲಾಗುತ್ತದೆ.