X

Uncategorized

ನೀನು…

ನೀನೊಂದು ಸಾಹಿತ್ಯ, ನನ್ನೆದೆಯ ಲಾಲಿತ್ಯ ಅತಿಮಧುರ ಸಾಂಗತ್ಯ, ಈ ಪ್ರೀತಿ ಸಿಹಿಸತ್ಯ ಬೆರಳುಗಳ ದಾಂಪತ್ಯ, ನಡೆಸೋಣ ಪ್ರತಿನಿತ್ಯ ನೀ ಬದುಕಿನಾಗತ್ಯ, ಈ ಬಂಧವೇ ಅಂತ್ಯ . ನಿನ್ನ ಕಂಗಳ…

ಕನ್ನ

ಕನ್ನಹಾಕುವ ಕಣ್ಣಸನ್ನೆಯುಖಿನ್ನಗೊಳಿಸುವ ಕೆನ್ನೆಬಣ್ಣವುಬೆನ್ನಮೇಲ್ಗಡೆ ಚಿನ್ನದಾ ಜಡೆಹೊನ್ನತೇಜದ ನಗುವ ಮುನ್ನಡೆ....ಮೆಲ್ಲನಾಚಿದೆ ಬೆಳ್ಳಗಲ್ಲವುಎಲ್ಲನೋಟದ ಕಳ್ಳಬಿಂದುವುಎಲ್ಲೆ ಮೀರದ ಚೆಲ್ಲುಮಾತಿಗೆಕಲ್ಲು ಹೃದಯವೂ ಹಲ್ಲೆಗೊಂಡಿದೆ... ಕೆಂಡಸಂಪಿಗೆ. . . . . . .…

ಕೆಂಡಸಂಪಿ…

ಕೆನ್ನೆ ಕಿತ್ತಳೆ, ಕತ್ತು ಬೆತ್ತಲೆಮುಖವು ನೈದಿಲೆ, ಒಮ್ಮೆ ಮುಟ್ಟಲೆ?'ನತ್ತು' ನಕ್ಕರೆ ಹೊಳೆವಳವಳೇಅಧರ ಅದುರಿರೆ ಮುತ್ತಿನಾಹೊಳೆ...ಹತ್ತುಸುತ್ತಿನ ಒತ್ತು ಜಡೆಯುಗತ್ತು ತುಂಬಿಹ ಸುತ್ತು ನಡೆಯುಒತ್ತಿ ತೀಡಿದ ಅಚ್ಚ ಕಾಡಿಗೆಅತ್ತರಿನ ಘಮ…

ಅವಳೆಂದರೆ…

ಅರೆ...!.ಸೂರ್ಯ ಪಶ್ಚಿಮಕ್ಕಿದ್ದಾನೆ,ಸೂರ್ಯಕಾಂತಿಯ ಮುಖ ಪೂರ್ವಕ್ಕೆ...!!.ಓ...!! ಪೂರ್ವಕ್ಕೆ ನನ್ನವಳು ನಿಂತಿದ್ದಾಳೆ..!ಕೆಂಡಸಂಪಿಗೆ

ಹೂಮೊಗ

ಏಯ್ ಚಿಟ್ಟೆ...!!ನಿಲ್ಲು...!!ಅದು ಹೂವಲ್ಲ, ನನ್ನವಳ ಮೊಗ...!!ಕೆಂಡಸಂಪಿಗೆ

ಹಂಬಲ

ಗೊಂದಲದ ಹುಡುಗಿಯೇ,ಹಂಬಲದ ಹುಡುಗ ನಾ,..ಚಂಚಲವ ಬದಿಗಿಟ್ಟುಸಂಚಲನವಾಗು ಬಾ...___________ನಿನ್ನ ನೆನಪಾಗಿ ಒಲೆ ಮೇಲಿರುವ ಅನ್ನದ ಪಾತ್ರೆ ಮೇಲಿನಬಟ್ಟಲಿನಂತಾಡುತ್ತದೆ ಮನಸ್ಸು... ನಿನ್ನ ನೆನಪುತೀವ್ರವಾಗಿ ಅದರಲ್ಲೇ ಮುಳುಗಿದಾಗಲೇ ಅದು ಮತ್ತೆಸ್ಥಿಮಿತಕ್ಕೆ ಬರೋದು..ಕೊನೇ…

ಪರಿಸರ

ಅವಸಾನದ ವಸನ ಹೊತ್ತುಪ್ರಹಸನದ ವ್ಯಸನಕಂಜಿಮಸಣದೆಡೆಗೆ ವದನವಿಟ್ಟುನಸುನಲುಗಿದೆ ಪರಿಸರ...ಹಸನಾಗುವ ಕನಸ ತೊರೆದುಮುಸಿನಗುತಿಹ ಮನಸ ಶಪಿಸಿಹಸೆಯೇರುವ ವಧುವಿನಂತೇಚಿತೆಯೇರಿದೆ ಪರಿಸರ...— feeling ಪರಿಸರ ಉಳಿಸಿ...

ಬಳ್ಳಿ

ಕೆಂಡಸಂಪಿಗೆ ↓ ನ ಗುವ ಹವಳವು ಅವಳ ಕಂಗಳು ನಾ ದ ಸೂಸುವ ಬಳೆಯ ಕೈಗಳು ನಿ ಯತ ಹಾರುವ ಮುದ್ದು ಮುಂಗುರುಳು ನೀ ಳ ಮೂಗಿನ…

ಕೆನ್ನೆ

ಆ ಮುದ್ದು ಬಿಳಿಗೆನ್ನೆ ಬೆಲ್ಲ ತುಂಬಿದ ದೊನ್ನೆ ಮರುಕಳಿಸೋ ಕಣ್ಸನ್ನೆ ಅವಳೀಗ ಮನದನ್ನೆ... ಮೋಹವೋ ದಾಹವೋ ಸಹವಾಸ ಬೇಕಿದೆ ದೇಹಕ್ಕೂ ನೇಹಕ್ಕೂ ಮಧುಮೇಹ ಬಂದಿದೆ ಹುಸಿಕಲಹ ಹೆಚ್ಚಿದೆ,…

ಸ್ಪೃಹಾ

#‎ಸ್ಪೃಹಾ‬ಕಣ್ ಬದಿಯ ಕಾಡಿಗೆಯುನಡುವೆ ಹೊಳೆಯುವ ಕಣ್ಣುಕಾರಿರುಳ ರಾತ್ರಿಯಲೂ ಚಂದ್ರ ಬಂದಂತೆ....ಶಶಿಮುಖಿಯ ಕೊರಳಲ್ಲಿಹೊಳೆವ ಚಂದದ ಸರವುಜೋತುಬಿದ್ದಿಹ ಪದಕದಿನಕರನ ತುಣುಕು ....ಕೈಬಳೆಯ ಮೇಲಿರುವಆ ಸಾಲು ಚುಕ್ಕಿಗಳುರಾತ್ರಿ ಕಾನನದಲ್ಲಿಮಿಂಚುಹುಳ ನಕ್ಕಂತೆ,..ಕೈಯಲ್ಲಿ ಕಳೆದುಂಬಿಕಾಣುತಿದೆ…

ಈ websiteನಲ್ಲಿ cookies ಬಳಸಲಾಗುತ್ತದೆ.