HomepageUncategorized ಕವನತನಯ 8 years ಮೊದಲು ವಿಭಾಗಗಳು: Uncategorized ಕವನ ರಸಾಯನ ಪಾನ ಎನಿತೊ ನೆಪದಲಿ ಇನಿತು ಗೀಚಲು ಕವನಕುಸುಮದ ವಿರಚನೆ ಬರೆದ ಸಾಲಲಿ ತಳೆದ ಮನದುಲಿ ಕಹಿಯ ನೆನಪ ವಿಮೋಚನೆ ಖುಷಿಗೆ ದುಃಖಕೆ ಕನಸು ಮುನಿಸಿಗೆ ಹೂಹುಡುಗಿ ಸವಿ ನೆನಪಿಗೆ ಬದುಕಲೆಲ್ಲಕು ಜೊತೆಯು ಅಕ್ಷರ ಅದುವೆ ಇರದಿರೆ ನಶ್ವರ ಕವನ ಕನಕವ ತುಂಬಿಕೊಳ್ಳಲು ತುಂಬಿತೆದೆಯಾ ಜೋಳಿಗೆ ಹೃದಯಮಧ್ಯದಿ ಪದ್ಯವಿದ್ದಿರೆ ಖುಷಿಯೆ ಕಾದಿದೆ ನಾಳೆಗೆ ಕವನತನಯ ಈ ಪೋಸ್ಟ್ ಅನ್ನು ಶೇರ್ ಮಾಡಲು: ಅಂಶುಮಾಲಿ... » « ವೈಶಾಖ ವೃಕ್ಷ ಕವನತನಯ: ಸಂಬಂಧಿಸಿದ ಬರಹ: ಅಂಶುಮಾಲಿ… "ಅಂಶೂsss ..... ಅಂಶೂsss... " ಆಗಿಂದ ಒಂದೇ ಸಮನೇ ರಾಣಿ ಕುಸುಮಪ್ರಭೆಯು ಕರೆಯುತ್ತಿದ್ದರೂ ಅಂಶುಮಾಲಿಯ ಪತ್ತೆಯೇ ಇಲ್ಲ. ಕೆಲವು ತಿಂಗಳ… ವೈಶಾಖ ವೃಕ್ಷ ದುಗುಡವೇಕೆ ಅತ್ತ ಇತ್ತ ಹೊರಳಿಸುತಿ ಯಾಕ ನೀ ಮುನಿಸಿನಾಗ ಕಣ್ಣ? ಮುತ್ತಿನಂತ ಕಣ್ಣಿತ್ತ ಸರಿಸಿ ನೋಡೊಮ್ಮೆ ಎದೆಯ ಹುಣ್ಣ ನಕ್ಕು, ತಿರುಗಿ…