X

ಹಂಸಯಾನ : ಕಾದಂಬರಿಯೊಡನೆ ನನ್ನ ಯಾನ…

ಕಾದಂಬರಿಯ ವಸ್ತುವಿನ ಬಗ್ಗೆ ಹೇಳುವುದಕ್ಕೆ ಮೊದಲು ನಾನು ಪುಸ್ತಕವನ್ನ ಕೊಂಡದ್ದರ ಬಗ್ಗೆ ಹೇಳಲೇಬೇಕು.. ಈ ಸಲದ ಬೇಂದ್ರೆ ಪ್ರಶಸ್ತಿಗೆ ಆಯ್ಕೆಯಾದ ತೇಜಸ್ವಿನಿ ಹೆಗಡೆ ಅವರ 'ಹಂಸಯಾನ'ದ ಬಗ್ಗೆ…

ಕವನತನಯ

ಕೆಂಡಸಂಪಿಗೆ

ಎನಿತು ಸುಖವೆ! ಬಿದ್ದ ಮೇಲೆ ನಿನ್ನ ತೋಳ ತೆಕ್ಕೆಗೆ! ಎಂತು ಸಖಿಯೆ, ತಂದೆ ಬಲವ ನನ್ನ ಬಾಳ ರೆಕ್ಕೆಗೆ! ತುಡಿವ ತುಟಿಯ ತವಕ ತಡೆವೆ ಸಿಹಿಯ ಮುತ್ತು…

ಕವನತನಯ

ಕೆಂಡಸಂಪಿಗೆ

ಮೀನಲೋಚನೆ!, ಕುಸುಮಕಕಂಗಳ ಮಿಟುಕಿ ಕಾಡಲುಬೇಡವೇ ಕೆಂಪುಗೆನ್ನೆಯ ಮುದ್ದುಗಲ್ಲವ ತೋರಿ ಕೆರಳಿಸಬೇಡವೇ... ತುಟಿಯನರಳಿಸಿ ದಂತಪಂಕ್ತಿಯ ಚಂದ ತೋರಲುಬೇಡವೇ ಕಿವಿಯ ಕೆಳಗಿನ ನವಿರುಗೂದಲ ಸರಿಸಿ ಸೆಳೆಯಲುಬೇಡವೇ... ಮೃದುಲ ಪಾದದ ಮುದ್ದು…

ಕವನತನಯ

ಕೆಂಡಸಂಪಿಗೆ

ಚಂದ್ರದರ್ಶನವಾದ ಕ್ಷಣದಲಿ ನಿನ್ನ ನೆನಪಿನ ಸುರಿಮಳೆ  ; ನಿನ್ನ ಕಂಗಳ ತಿಂಗಳಲಿ ತಂ- ಪಾಯಿತೆನ್ನೆದೆ, ಕೋಮಲೆ   ! ಬೆಸೆದ ಕಂಗಳ ಭದ್ರ ಸೇತುವೆ ಮೇಲೆ ಪ್ರಿಯಸಂವಾದವು  |…

ಕವನತನಯ

ಮದುವೆಯದು ‘ಬಂಧ’ವಲ್ಲ   ಸ್ವಚ್ಛಂದ|| – ಅಮೂಲ್ಯ ಭಾರದ್ವಾಜ್

ಇದು ಲೇಖಕಿ ಅಮೂಲ್ಯ ಭಾರದ್ವಾಜ್ ಅವರ ಅಂಕಣ... ಪ್ರೀತಿ ಕುರುಡು ಅಂತಾರೆ, ಆದರೆ ಆ ಮುಚ್ಚಿರುವ ಕಣ್ತೆರೆಸಲು ಸೃಷ್ಟಿಯಾಗಿರುವ ಔಷಧಿಯೇ ಮದುವೆ ಎಂಬುದು ತಿಳಿದವರ ನಾಣ್ನುಡಿ. ಮದುವೆಯ ಕುರಿತು ಅನೇಕರು ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಸಾರ್ವತ್ರಿಕ ಅಭಿಮತವಾಗಿ, ಅಷ್ಟೆ ಏಕೆ ಒಂದೊಂದು ಥಿಯರಿಯನ್ನಾಗಿಯೇ ನೀಡಿಬಿಟ್ಟಿದ್ದಾರೆ. ಆದರೆ ಮದುವೆಯ ಅನುಭವವಂತೂ ವ್ಯಕ್ತಿ ನಿರ್ಮಿತ ಅಂತೆಯೆ ವ್ಯಕ್ತಿ ಕಲ್ಪಿತ. ಕೆಲವೊಮ್ಮೆ ಸಾವಿರ ವ್ಯತ್ಯಯಗಳ ನಡುವೆ 'ಸಾರಿ ಸಾರಿ' ಹೇಳಿಕೊಂಡು, ಮತ್ತೆ ಕೆಲವೊಮ್ಮೆ 'ಮೆರ್ರಿ ಗೊ' ಹಾಡಿಕೊಂಡು ಇನ್ನೊಮ್ಮೆ ಮೈ ಪರಚಿಕೊಂಡು ಮಗದೊಮ್ಮೆ ಮೌನಿಯಾಗಿ, ಹೀಗೆ ಮದುವೆಯೆಂಬ ಈ ಮೂರಕ್ಷರದ ಪದ ಒಬ್ಬ ವ್ಯಕ್ತಿಯ ಅಂತರಾಳವನ್ನು ಪೂರ್ಣವಾಗಿ ಬೆತ್ತಲು ಮಾಡುತ್ತಾ ಮುಂಬಿಡುತ್ತದೆ. ಈ ಪರಿ ಸಾಗುವ ಜೀವನದಲ್ಲಿ ಯಾರೂ ಯಾವ ಭಾವನೆಯಿಂದಲೂ ವಂಚಿತವಾಗದಂತೆ ಕಟ್ಟುನಿಟ್ಟಾಗಿಯೂ ನೋಡಿಕೊಳ್ಳುತ್ತದೆ, ಪರಂತು ವ್ಯಕ್ತಿಯ ಭಾವ-ಭಕುತಿಗಳಿಗೆ ಅನುಗುಣವಾಗಿ. ಹೀಗೆ ಸಾವಿರ ಸವಾಲುಗಳನ್ನು ಒಡ್ಡುವ ಮದುವೆಯನ್ನು ನೆನೆದರೆ, ಒಮ್ಮೊಮ್ಮೆ ಹೀಗೂ ಅನ್ನಿಸಿ ಬಿಡುತ್ತದೆ. "ನಮ್ಮ ದೇಶದ ಸಂಪ್ರದಾಯದಲ್ಲಿ ಈ ಮೂರಕ್ಷರಕ್ಕೆ ಅದೆಷ್ಟು ಬೆಲೆ? ಅದ್ಯಾಕಪ್ಪ!" ಎಂದು. ಅದೊಂದು ಜೀವನದ ಪಾಠ ಕಲಿಸುವ ಅತ್ಯೆತ್ತರ ಘಟ್ಟ. ಹಾಗಾದರೆ ಪರಿಚಯವೆ ಇಲ್ಲದ ಒಬ್ಬ      ವ್ಯಕ್ತಿಯೊಂದಿಗೆ ಹೇಗೆ ನಂಟು ಬೆಳೆದೇ ಸಾಗುತ್ತದೆ? ಅದೇ ಮದುವೆಯ ಮಾಂತ್ರಿಕತೆ. ಬೇಸರವೇ ಬಾರದೆ?  ಅದು ಹೇಗೆ? ಏಕೆ? ಏಕೆ ಎಂಬುದಕ್ಕೆ ಬಲು ಸುಲಭದ ಉತ್ತರವೇ- ಮರೆವು. ಅದು ನಮ್ಮ ನಾಡಿಗೆ ದೈವದತ್ತವಾಗಿ ಒದಗಿರುವ ವರವೆಂದರೆ ತಪ್ಪಾಗದು. ಹೇಳಲು ಸುಲಭವಾದರೂ ಮರೆಯಲು ಬಲು ಕಷ್ಟ. ಆದರೂ, ಒಮ್ಮೆ ನಮ್ಮ ನೆಲದಲ್ಲಿ ಹುಟ್ಟಿ ಗಂಡನಿಂದ ಶೋಷಿತ ಹೆಣ್ಣುಮಗುವನ್ನು ಕೇಳಿ! "ಅಯ್ಯೋ ಹೋಗಲಿ ಬಿಡಿ. ನಮ್ಮ ಯಜಮಾನರು ಹಂಗೆನೆ" ಎನ್ನುವುದು ನಮ್ಮಗಳ ಕಿವಿಗೆ ಬೀಳುವ ಕಟ್ಟಿಟ್ಟ ಉತ್ತರ. ಬರಿಯ ಹೆಣ್ಣೊಬ್ಬಳೆ ಅಲ್ಲ. ಗಂಡನೂ ಅಷ್ಟೆ. ಅದೇನೆ ಇದ್ದರು "ನನ್ನವಳು" ಎಂಬ ಭಾವವನ್ನು ಅವನ ಮನದಿಂದ ಕಿತ್ತೊಗೆಯಲಾರ. ಅಷ್ಟಿಲ್ಲದೆ ಹೇಳುವರೆ? ಗಂಡಹೆಂಡಿರ ಜಗಳ ಉಂಡು ಮಲಗುವ ತನಕವೆಂದು. ಅದು ಹೌದು. ಇಷ್ಟೆಲ್ಲಾ ಹೇಳಿದ ಮೇಲೆ ಮದುವೆ ಒಂದು ಸುಂದರ ಬಾಂಧವ್ಯವೆಂದಾಯಿತು. ಮತ್ತೆ ಸಮಸ್ಯೆ ಏನು? ಈ ಚರ್ಚೆ ಈಗೇಕೆ? ಹೀಗೆ ಕೇಳಲೇಬೇಕು. ಉತ್ತರವಂತೂ ಅತಿಸೂಕ್ಷ್ಮ. ಈಗ ಹೆಚ್ಚುತ್ತಿರುವ ಸಂಬಂಧಗಳ ನಡುವಿನ ಬಿರುಕುಗಳು!…

ಕವನತನಯ

ಕಾಂತೆ…!

ಕಾಂತೆ! ಹೃದಯಾಕ್ರಾಂತೆ! ಶಾಂತೆಯೆ ದಂತಕಾಂತಿಯ ರೂಪಸಿ! ನಿಂತೆ ನನ್ನೆದೆ ಪ್ರಾಂತದಲಿ ಸಂ- ತಸದ ಕ್ರಾಂತಿಯ ರೂಪಿಸಿ! ಅಂತರಂಗವ ರಂಗುಗೊಳಿಸಿದ ತಪ್ಪು ನಿನಗಾರೋಪಿಸಿ ಸ್ವರ್ಗಸುಂದರ ಸಂಗ ಶಿಕ್ಷೆಯ ನಿಂಗೆ…

ಕವನತನಯ

ನಮನ..

ಜನುಮ ಜನುಮದ ಸ್ಮೃತಿವಿಲಾಸದ ರಾಗ ನಿನ್ನಡಿಗರ್ಪಣೆ... ಜನನಿ! ತನುಮನ ಭವದಿ ಭವಿಸುವ ಭಾವ ಕುಸುಮದೊಳರ್ಚನೆ ಕರುಣೆಯೆನ್ನುವ ಅರುಣಕಿರಣಕೆ ಕಾದಿರುವ ಮನಚಂದಿರ ಮಮತೆಯಿಂದಲಿ ಮತಿಯ ನೀಡಲು ಜನುಮಜನುಮವು ಸುಂದರ!…

ಕವನತನಯ

ಕೆಂಡಸಂಪಿಗೆ

#ಕೆಂಡಸಂಪಿಗೆ ನನ್ನೆಡೆಗೆ ನೋಡಿ ಮುಂಗುರುಳ ತೀಡಿ ನೀ ಕಣ್ಣು ಹೊಡೆಯಬೇಡ ಆ ಹಾಲಗೆನ್ನೆ ಬಿರಿವಂತೆ ನನ್ನೆ ನೋಡಿ ನಗೆಯಾಡಬೇಡ ತಂಗಾಳಿಗೊಂದು ಮುತ್ತಿಟ್ಟು ನನ್ನ ಹೆಸರುಸುರಿ ಕಳಿಸಬೇಡ ಮುಖದೊಡವೆ…

ಕವನತನಯ

ಶರದಪ್ರೇಮ

ಮಂದಹಾಸವದಂದ! ಭ್ರೂವಿಲಾಸದ ಚಂದ! ಚೆಲುವೆ ಚುಂಬನಕೊಲಿಯೆ, ಮಾತು ಮಂದ | ಅಂದಗಾತಿಯು ತಂದ ನಲ್ಮೆಶಶಿಬೆಳಕಿಂದ ಸುಂದರಾಹ್ಲಾದ, ಎದೆಗೊಲವ ಬಂಧ! || ಹಸಿರಿನಲಿ ತುಸುನಾಚಿ ನಿಂತವಳ ಮೈಕಾಂತಿ ಕಂಡು…

ಕವನತನಯ

ಕ್ವಿಕ್ ಕ್ಲಿಕ್… ಮಲೆನಾಡ ಮಾಧುರ್ಯ ಮೊಬೈಲ್ ಕಣ್ಣಲ್ಲಿ…

ಪ್ರಕೃತಿಯ ಅಸಂಖ್ಯವರ್ಣವೇಷದಲ್ಲಿ ಕಣ್ಣಿಗೆ ಕಾಣುವ ಬಣ್ಣಗಳು ಹಲವು, ಕ್ಯಾಮರಾ ಕಣ್ಣಿಗೆ ಕಾಣುವ ಬಣ್ಣಗಳು ಬೇರೆಯವು. ಕೆಲವೊಮ್ಮೆ ಕಣ್ಣಿಗಿಂತ ಚೆನ್ನಾಗಿ ಕ್ಯಾಮರಾ ನೋಡಬಲ್ಲದು, ರಸಿಕತೆಯ ಪರೀಕ್ಷೆಯಲ್ಲಿ ತಾನೇ ಗೆಲ್ಲುತ್ತ....…

ಕವನತನಯ

ಈ websiteನಲ್ಲಿ cookies ಬಳಸಲಾಗುತ್ತದೆ.