X

ಕನಸು

ಗೆಳತೀ ....ಕನಸುಗಳಿಗೆಕಣ್ಣೇ ದಾರಿಯೆಂದುಮುಚ್ಚಿದೆ ಕಂಗಳನ್ನು....ಇನ್ನಷ್ಟು ಕಾಡಿದವು ನಿನ್ನ ನೆನಪುಗಳು...!!ಜೊತೆಗೆ ಕನಸುಗಳೂ.....ಹೇಳು ಈಗ...ಹೇಗೆ ಮುಚ್ಚಲಿ ಮನದ ಬಾಗಿಲ...?!. . . . . . . ಸಖ್ಯಮೇಧ

ಕವನತನಯ

ಅವಳು ಕೆಂಡಸಂಪಿಗೆ

ಕೆಂಡಸಂಪಿಗೆ ಕೊಯ್ದುಘಮದ ಹೂಗಳ ಆಯ್ದುಪಕಳೆಗಳ ತೇಯ್ದುಜಿನುಗೋ ನೀರನು ತೆಗೆದುಕೆಂಪು ಗಂಧವನುಳಿದುಕೊಂಚ ಚಂದನ ಬಳಿದುಜೊತೆಗೆ ಕೇಸರಿ ಅಳೆದುಬರುವ ಗಂಧದ ಹಿಟ್ಟಿನಲಿಗೊಂಬೆಯೊಂದನು ಮಾಡೆ-ಅವಳ ಬಣ್ಣವೇ ಬಂದಿತ್ತು..!ಅವಳುಸಿರ ಘಮವಿತ್ತು!. ಕೆಂಡಸಂಪಿಗೆಯಂಥವಳು ..!.…

ಕವನತನಯ

ಮುತ್ತು

ಅವಳು ಪ್ರತಿಬಾರಿ ನಕ್ಕಾಗಲೂಬೀಳುತ್ತಿದ್ದ ಮುತ್ತುಗಳನ್ನುಆಯ್ದು ಎದೆಯೊಳಗೆ ಬಚ್ಚಿಡುತ್ತಿದ್ದೆ...ಇಂದು ಎದೆಗೂಡನ್ನು ಎಷ್ಟೇತಡಕಾಡಿದರೂ....ನೆನಪುಗಳಷ್ಟೇ ಸಿಕ್ಕಿವೆ...ಮುತ್ತೂ ಇಲ್ಲ.. ನಗುವೂ ಇಲ್ಲ... . . . . ಸಖ್ಯಮೇಧ

ಕವನತನಯ

ಕವನ

"ಕವನ"ಅವಳು ನೆನಪಾಗಿಬದಲಾದಾಗಉಳಿದ ಅವಶೇಷವೇಕವನ... . . . . ಸಖ್ಯಮೇಧ

ಕವನತನಯ

ಗೆಳತೀ …

ಅಂಗೈಲಿ ಹಿಡಿಯುವೆನು ಆ ಚಂದಿರನ ನಾನು!ಸಪ್ತಸಾಗರವೀಜಿ ದಾಟಬಲ್ಲೆ...!!ಬಲಗೈಲಿ ರಾಜ್ಯವನೇ ಆಳುವೆನು, ಗೆಳತೀ...ನೀ ಎನ್ನ ಎಡಗೈಯ ಹಿಡಿದಿರುವಾಗ...!!. . . . . . . ಸಖ್ಯಮೇಧ

ಕವನತನಯ

ಕಣ್ಣು_ಕಾವ್ಯ

"ನಿನ್ನ ಕಂಗಳೆರಡು ಕಾವ್ಯಗಳು!"ಅವನು ಬಾಯ್ತುಂಬ ಹೊಗಳಿದಾಗಸಂತಸವಾದಂತೆ ನಟಿಸಿದಳು...ಇರುಳ ತುಂಬ ನಿದ್ದೆಗೆಟ್ಟುಅವನ ಬರವು ಕಾಯುತ್ತಿದ್ದ ಕಂಗಳುಸತ್ಯ ಹೇಳುತ್ತಿದ್ದವು.... . . . . ಸಖ್ಯಮೇಧ

ಕವನತನಯ

ಕೆಂಡಸಂಪಿಗೆ …

ಕೆಂಡಸಂಪಿಗೆ ನಕ್ಕುಹಾಲ್ಗಡಲು ಹರಿದಿಹುದು!ಬೆರೆತಿಹುದು ಕೇಸರಿಯೂಅವಳ ಘಮದಿಂದ..!.ನಾಜೂಕು ಜೋಕೊಂದಅವಳಿಗುಸುರುವ ತನಕಕೆಂಡಸಂಪಿಗೆ ಕಣ್ಣುಕಾಮನಾ ಬಿಲ್ಲು..!.ನನ್ನನ್ನು ತಾ ನಗಿಸಿಒಳಗೊಳಗೆ ತಾ ನಗುವಅವಳ ಹಾಲ್ಗೆನ್ನೆಯಲಿರಂಗು ರಂಗೋಲಿ .!!.ಕಡಲೊಳಗೆ ಇಹುದಂತೆಹವಳ ಮುತ್ತಿನ ರಾಶಿಅವಳೂನು ಕಡಲೇನೆ!ಸಂತಸದ…

ಕವನತನಯ

ಪ್ರೀತಿ

ಅವನ ಕಂಗಳ ಶರಧಿಯಲ್ಲಿಅವಳು ಮುಳುಗೇಳುತ್ತಾಳೆ...ಅವಳ ಕಂಗಳ ಶರಧಿಯ ವಿಸ್ತಾರ ಕಂಡುಅವನು ಬೆರಗಾಗುತ್ತಾನೆ...ಅವನು 'ಅವಳೇ ಕಾವ್ಯ ' ಎನ್ನುತ್ತಾನೆ...ಅವಳು 'ಅವನುಸಿರಿನಲಿ ಕಾವ್ಯ ಹುಟ್ಟಿತು' ಎನ್ನುತ್ತಾಳೆ...ಅವನ ಬಾಳಿಗೆ ಅವಳ ಕಂಗಳ…

ಕವನತನಯ

ಅವಳು…

ಬಿಸಿಲಲ್ಲಿ ಹೊಳೆಹೊಳೆವಎಲೆತುದಿಯ ಹನಿಯಂತೆಚಿಗುರೆಲೆಯ ಕಂಗಳಲಿನಗುವಳಾಕೆ..!ಮೇಘರಾಶಿಯ ನಡುವೆಇಣುಕುವಾ ರವಿಯಂತೆಓರೆನೋಟವ ಬೀರಿನೋಡುವಾಕೆ..!. . . . . ಸಖ್ಯಮೇಧ

ಕವನತನಯ

ಮುತ್ತು

ನೆನಪುಗಳ ಹಾರಪೋಣಿಸುತ್ತಿದ್ದವಳಿಗೆಮುತ್ತುಗಳು ಸಾಲದೇ ಹೋದವು....ತಡಕಾಡಿದಳು-ಅವನ ಕಂಗಳಲ್ಲಿ..!!. . . . ಸಖ್ಯಮೇಧ

ಕವನತನಯ

ಈ websiteನಲ್ಲಿ cookies ಬಳಸಲಾಗುತ್ತದೆ.