ಕಳವಳ
ಒಳಗೊಳಗೇ ಕಳವಳವುತಿಳಿಗೊಳದಿ ಅಲೆಯಲೆಯುಎಳೆಬಿಸಿಲ ಝಳಕಕ್ಕೆಸುಡುಬಿಸಿಲ ಬಳುವಳಿಯುತಿಳುವಳಿಕೆ ಮನಕಿಲ್ಲತಳಮಳಕೆ ಕೊನೆಯಿಲ್ಲಕೊಳೆಕೊಳೆತು ನಾರುತಿವೆಅಳಿದುಳಿದ ನೆನಪುಗಳೂಕಳೆಕೊಳೆಗಳೆದೆಯಲ್ಲಿಬೆಳೆಬೆಳೆದು ನಿಂತಿವೆ...ಭಾವಕ್ಕಿಲ್ಲ_ಬೆಲೆ. . . . . ಸಖ್ಯಮೇಧ
ಒಳಗೊಳಗೇ ಕಳವಳವುತಿಳಿಗೊಳದಿ ಅಲೆಯಲೆಯುಎಳೆಬಿಸಿಲ ಝಳಕಕ್ಕೆಸುಡುಬಿಸಿಲ ಬಳುವಳಿಯುತಿಳುವಳಿಕೆ ಮನಕಿಲ್ಲತಳಮಳಕೆ ಕೊನೆಯಿಲ್ಲಕೊಳೆಕೊಳೆತು ನಾರುತಿವೆಅಳಿದುಳಿದ ನೆನಪುಗಳೂಕಳೆಕೊಳೆಗಳೆದೆಯಲ್ಲಿಬೆಳೆಬೆಳೆದು ನಿಂತಿವೆ...ಭಾವಕ್ಕಿಲ್ಲ_ಬೆಲೆ. . . . . ಸಖ್ಯಮೇಧ
ನೀ ಕದ್ದು ಮಾತಾಡು, ಮುದ್ದಾದ ಪದ ಹೇಳು ಮನ ಎದ್ದು ಕುಣಿವಂತೆ ಉದ್ದುದ್ದ ಕತೆ ಹೇಳು, ಆಗಾಗ ಪೆದ್ದಾಗಿ ಬಿದ್ದ ಕನಸನು ಹೇಳು, ಖುದ್ದಾಗಿ ಬಂದುಬಿಡು, ಬಿದ್ದಿರುವೆ ಪ್ರೀತಿಯಲಿ.... ಕೆಂಡಸಂಪಿಗೆ…
ಅವಳ ಕದಪುಗಳಲ್ಲಿ ಹೊಸ ಕೆಂಡಸಂಪಿಗೆ...ಅವಳು ನಾಚುತ್ತಲಿರೆ ಅವು ಕೆಂಪಕೆಂಪಗೆ....ಸೋತು ಹೋಗುವ ಭಯವು ನನ್ನವಳಕಂಪಿಗೆ...ಮೈಮರೆತು ಬಿಡುವಾಸೆ ಅವಳುಸಿರ ಇಂಪಿಗೆ..... . . . . . . .…
ಅವಸರಿಸಿ, ಕಾತರಿಸಿ ಕಾದಿರುವೆ ಸಮರಸಕೆಸರಸರನೆ ವಿರಹವನು ದೂರ ಮಾಡು...ಮುನ್ನುಡಿಯೇ ಇಲ್ಲದೆಯೇ ಹುಟ್ಟಿಹುದು ಪ್ರೀತಿ...ನಿನ್ನ ಸನಿಹವು ನನಗೆ ಆಪ್ಯಾಯಮಾನ... ಕೆಂಡಸಂಪಿಗೆ ..... . . . . .…
ನಿನ್ನೊಲವಿನ ತೆವಲು ಕವಲೊಡೆದಿದೆತನುವಲಿ....ಸಲಹಿರುವೆ ಹಲವಾರು ಮಹಲುಗಳ ಮನದಲಿ...ಉಯಿಲಾಗಿದೆ ನನ್ನ ತನ ನಿನ್ನಯ ಹೆಸರಲಿ...ಗೆಲುವಾಗು ಬಲವಾಗು , ಜೊತೆ ಬಂದು ಬಾಳಲಿ....ಕೆಂಡಸಂಪಿಗೆ...
ನೋಡು ಗೆಳತೀ ...ಸಂಕ್ರಮಣ ಬಂತೆಂದು ಸೂರ್ಯನೂ ಗತಿ ಬದಲಿಸಿದ್ದಾನೆ....ಹತ್ತು ಸಂಕ್ರಮಣ ಕಳೆದರೂಎಗ್ಗಿಲ್ಲದೆ, ಬಾಗದೇ ನಡೆದಿದೆ ಒಲವು....ಈ ಪ್ರೀತಿ ನಿರಂತರಕೆಂಡಸಂಪಿಗೆ....
ಗೆಳತೀ...,ಆಕಾಶದಲ್ಲಿ ನಕ್ಷತ್ರಗಳೆಷ್ಟಿವೆಯೋಗೊತ್ತಿಲ್ಲ...ಆದರೆ...ಎಷ್ಟಿರಬೇಕಿತ್ತೋ ಅದಕ್ಕಿಂತ ಎರಡು ಕಮ್ಮಿಯಿದೆ...ಮತ್ತು...ಆ ಎರಡೂ ನಿನ್ನಕಂಗಳಲ್ಲಿವೆ....!!. . . . . . ಸಖ್ಯಮೇಧ
ಬಿಂಕದಲಿ ನಿಂತಿತ್ತು ಆ ಕೆಂಡಸಂಪಿಗೆಅದ ಕಂಡು ಮನದಲ್ಲಿ ನೆನಪುಗಳ ಮೆರವಣಿಗೆ...ಹೂವಲ್ಲೂ, ಘಮದಲ್ಲೂ ಅವಳದ್ದೇ ನೆನಪು...ಹೂವಲ್ಲೂ ಅವಳ ಮೊಗ ಅರಳುವುದೇ ಒನಪು....ಗೆಳತೀ...ಕತ್ತಲೆಯು ಏರುತಿರೆನಿನ್ನ ನಗೆಯಾ ಹೂವುಅರಳುತಿರೆ- ನನಗಾಗಮತ್ತೆ ಮುಂಜಾವು...!.…
ಗೆಳತೀ ...ನನ್ನಅಚ್ಚುಮೆಚ್ಚಿನಕವನ ಸಂಕಲನಬಿಡುಗಡೆಯಾದದ್ದುನೀ ಹುಟ್ಟಿದದಿನದಂದೇ.....!. . . . . ಸಖ್ಯಮೇಧ
ಗೆಳತೀ ...ಕೊಳವೆಂಬ ತಟ್ಟೆಯಲ್ಲಿಚಂದ್ರನೆಂಬ ಕರ್ಪೂರ.....ನಮ್ಮ ಪ್ರೀತಿಗೆ ಶುಭಕೋರುವಮಂಗಳ ನೀರಾಜನ...!. . . . . ಸಖ್ಯಮೇಧ
ಈ websiteನಲ್ಲಿ cookies ಬಳಸಲಾಗುತ್ತದೆ.