ಕಳವಳ

ಒಳಗೊಳಗೇ ಕಳವಳವು
ತಿಳಿಗೊಳದಿ ಅಲೆಯಲೆಯು
ಎಳೆಬಿಸಿಲ ಝಳಕಕ್ಕೆ
ಸುಡುಬಿಸಿಲ ಬಳುವಳಿಯು
ತಿಳುವಳಿಕೆ ಮನಕಿಲ್ಲ
ತಳಮಳಕೆ ಕೊನೆಯಿಲ್ಲ
ಕೊಳೆಕೊಳೆತು ನಾರುತಿವೆ
ಅಳಿದುಳಿದ ನೆನಪುಗಳೂ
ಕಳೆಕೊಳೆಗಳೆದೆಯಲ್ಲಿ
ಬೆಳೆಬೆಳೆದು ನಿಂತಿವೆ…
ಭಾವಕ್ಕಿಲ್ಲ_ಬೆಲೆ
. . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕದ್ದು ಮಾತಾಡು

ನೀ ಕದ್ದು ಮಾತಾಡು, ಮುದ್ದಾದ ಪದ ಹೇಳು
ಮನ ಎದ್ದು ಕುಣಿವಂತೆ ಉದ್ದುದ್ದ ಕತೆ ಹೇಳು,
ಆಗಾಗ ಪೆದ್ದಾಗಿ ಬಿದ್ದ ಕನಸನು ಹೇಳು,
ಖುದ್ದಾಗಿ ಬಂದುಬಿಡು, ಬಿದ್ದಿರುವೆ ಪ್ರೀತಿಯಲಿ….

ಕೆಂಡಸಂಪಿಗೆ
. . . . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕದಪು ಕೆಂಡಸಂಪಿಗೆ

ಅವಳ ಕದಪುಗಳಲ್ಲಿ ಹೊಸ  ಕೆಂಡಸಂಪಿಗೆ
ಅವಳು ನಾಚುತ್ತಲಿರೆ ಅವು ಕೆಂಪಕೆಂಪಗೆ….
ಸೋತು ಹೋಗುವ ಭಯವು ನನ್ನವಳ
ಕಂಪಿಗೆ…
ಮೈಮರೆತು ಬಿಡುವಾಸೆ ಅವಳುಸಿರ ಇಂಪಿಗೆ….
. . . . . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಅವಸರ

ಅವಸರಿಸಿ, ಕಾತರಿಸಿ ಕಾದಿರುವೆ ಸಮರಸಕೆ
ಸರಸರನೆ ವಿರಹವನು ದೂರ ಮಾಡು…
ಮುನ್ನುಡಿಯೇ ಇಲ್ಲದೆಯೇ ಹುಟ್ಟಿಹುದು ಪ್ರೀತಿ…
ನಿನ್ನ ಸನಿಹವು ನನಗೆ ಆಪ್ಯಾಯಮಾನ…
ಕೆಂಡಸಂಪಿಗೆ ….
. . . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಒಲವು

ನಿನ್ನೊಲವಿನ ತೆವಲು ಕವಲೊಡೆದಿದೆ
ತನುವಲಿ….
ಸಲಹಿರುವೆ ಹಲವಾರು ಮಹಲುಗಳ ಮನದಲಿ…
ಉಯಿಲಾಗಿದೆ ನನ್ನ ತನ ನಿನ್ನಯ ಹೆಸರಲಿ…
ಗೆಲುವಾಗು ಬಲವಾಗು , ಜೊತೆ ಬಂದು ಬಾಳಲಿ….
ಕೆಂಡಸಂಪಿಗೆ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಸಂಕ್ರಾಂತಿ

ನೋಡು ಗೆಳತೀ …

ಸಂಕ್ರಮಣ ಬಂತೆಂದು
ಸೂರ್ಯನೂ ಗತಿ ಬದಲಿಸಿದ್ದಾನೆ…
.
ಹತ್ತು ಸಂಕ್ರಮಣ ಕಳೆದರೂ
ಎಗ್ಗಿಲ್ಲದೆ, ಬಾಗದೇ
ನಡೆದಿದೆ ಒಲವು…
.
ಈ ಪ್ರೀತಿ ನಿರಂತರ

ಕೆಂಡಸಂಪಿಗೆ….

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕಣ್ಣು

ಗೆಳತೀ…,

ಆಕಾಶದಲ್ಲಿ
ನಕ್ಷತ್ರಗಳೆಷ್ಟಿವೆಯೋ
ಗೊತ್ತಿಲ್ಲ…
ಆದರೆ…
ಎಷ್ಟಿರಬೇಕಿತ್ತೋ
ಅದಕ್ಕಿಂತ ಎರಡು ಕಮ್ಮಿಯಿದೆ…
ಮತ್ತು…
ಆ ಎರಡೂ ನಿನ್ನ
ಕಂಗಳಲ್ಲಿವೆ….!!

. . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಆಕೆ

ಬಿಂಕದಲಿ ನಿಂತಿತ್ತು ಆ  ಕೆಂಡಸಂಪಿಗೆ
ಅದ ಕಂಡು ಮನದಲ್ಲಿ ನೆನಪುಗಳ ಮೆರವಣಿಗೆ…
ಹೂವಲ್ಲೂ, ಘಮದಲ್ಲೂ ಅವಳದ್ದೇ ನೆನಪು…
ಹೂವಲ್ಲೂ ಅವಳ ಮೊಗ ಅರಳುವುದೇ ಒನಪು…
.
ಗೆಳತೀ…
ಕತ್ತಲೆಯು ಏರುತಿರೆ
ನಿನ್ನ ನಗೆಯಾ ಹೂವು
ಅರಳುತಿರೆ- ನನಗಾಗ
ಮತ್ತೆ ಮುಂಜಾವು…!
. . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಸಂಕಲನ

ಗೆಳತೀ …
ನನ್ನ
ಅಚ್ಚುಮೆಚ್ಚಿನ
ಕವನ ಸಂಕಲನ
ಬಿಡುಗಡೆಯಾದದ್ದು
ನೀ ಹುಟ್ಟಿದ
ದಿನದಂದೇ…..!

. . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ನೀರಾಜನ

ಗೆಳತೀ …
ಕೊಳವೆಂಬ ತಟ್ಟೆಯಲ್ಲಿ
ಚಂದ್ರನೆಂಬ ಕರ್ಪೂರ….
.
ನಮ್ಮ ಪ್ರೀತಿಗೆ ಶುಭಕೋರುವ
ಮಂಗಳ ನೀರಾಜನ…!
. . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು: