ಕೆಂಪು ಸಂಪಿ

ಕೆಂಡಸಂಪಿಗೆ ಬೇಕೆಂದು ನನ್ನವಳ ಹಟ…
ಈಗೆಲ್ಲಿ ಸಿಕ್ಕೀತು?! ಇದೊಳ್ಳೇ ಸಂಕಟ..
.
ಅವಳ ಮೊಗದಾ ಮುಂದೆ ಕನ್ನಡಿಯ ಹಿಡಿದೆ…
“ನೋಡು ಇವಳೇನೆ ಕೆಂಡಸಂಪಿಗೆ ” ಎಂದೆ…
.
ನಾಚಿ ನಕ್ಕವಳ ಕೆನ್ನೆ ಕೆಂಪು ಕೆಂಪು…
ಅವಳ ನಗುವನು ನೋಡಿ ನನ್ನೆದೆಯೂ ತಂಪು…
. . . . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಹೂ

ಹುಡುಗೀ…
ನಾನು ನಿನ್ನನ್ನು
ಕೆಂಡಸಂಪಿಗೆಯಂಥವಳು”
ಅಂದಿದ್ದೇನೋ ನಿಜ….

ಆದರೆ ನೀನು
“ಹುಡುಗರು ಹೂವು ಬೇಡಬಾರದು”
ಅಂದಿದ್ದು ಯಾಕೆ….

ಈ ಪೋಸ್ಟ್ ಅನ್ನು ಶೇರ್ ಮಾಡಲು: