ಕದಪು ಕೆಂಡಸಂಪಿಗೆ
ಅವಳ ಕದಪುಗಳಲ್ಲಿ ಹೊಸ ಕೆಂಡಸಂಪಿಗೆ...ಅವಳು ನಾಚುತ್ತಲಿರೆ ಅವು ಕೆಂಪಕೆಂಪಗೆ....ಸೋತು ಹೋಗುವ ಭಯವು ನನ್ನವಳಕಂಪಿಗೆ...ಮೈಮರೆತು ಬಿಡುವಾಸೆ ಅವಳುಸಿರ ಇಂಪಿಗೆ..... . . . . . . .…
ಅವಳ ಕದಪುಗಳಲ್ಲಿ ಹೊಸ ಕೆಂಡಸಂಪಿಗೆ...ಅವಳು ನಾಚುತ್ತಲಿರೆ ಅವು ಕೆಂಪಕೆಂಪಗೆ....ಸೋತು ಹೋಗುವ ಭಯವು ನನ್ನವಳಕಂಪಿಗೆ...ಮೈಮರೆತು ಬಿಡುವಾಸೆ ಅವಳುಸಿರ ಇಂಪಿಗೆ..... . . . . . . .…
ಹೊಸತನ....!!ಹಂಬಲವೂ ಕಂಬನಿಯೂ ದೂರಾಯ್ತು; ಸಂತಸದ-ಹಂದರವು, ಸುಂದರವು ಮನವು ಈಗ...!ಬದಲಾದೆ, ಮೊದಲಾದೆ, ಕೆಂಡಸಂಪಿಗೆ ಕೇಳೆ-ಹೊಸಕಂಪು ಬಾಳಲ್ಲಿ ಸೂಸುತಿಹುದು..!!.ಚಂದವಿದೆ ಹೊಸ ಬಾಳು, ಪರಿಶುಭ್ರ ಬಾನಂತೆಹೊಸಚುಕ್ಕಿ ಎರಡೆರಡು ಹೊಳೆಯುತಿಹುದು...ಸ್ವಚ್ಛಂದ ಮನಸು, ಸ್ವಚ್ಛಂದ…
ಅವಸರಿಸಿ, ಕಾತರಿಸಿ ಕಾದಿರುವೆ ಸಮರಸಕೆಸರಸರನೆ ವಿರಹವನು ದೂರ ಮಾಡು...ಮುನ್ನುಡಿಯೇ ಇಲ್ಲದೆಯೇ ಹುಟ್ಟಿಹುದು ಪ್ರೀತಿ...ನಿನ್ನ ಸನಿಹವು ನನಗೆ ಆಪ್ಯಾಯಮಾನ... ಕೆಂಡಸಂಪಿಗೆ ..... . . . . .…
ನಿನ್ನೊಲವಿನ ತೆವಲು ಕವಲೊಡೆದಿದೆತನುವಲಿ....ಸಲಹಿರುವೆ ಹಲವಾರು ಮಹಲುಗಳ ಮನದಲಿ...ಉಯಿಲಾಗಿದೆ ನನ್ನ ತನ ನಿನ್ನಯ ಹೆಸರಲಿ...ಗೆಲುವಾಗು ಬಲವಾಗು , ಜೊತೆ ಬಂದು ಬಾಳಲಿ....ಕೆಂಡಸಂಪಿಗೆ...
ನೋಡು ಗೆಳತೀ ...ಸಂಕ್ರಮಣ ಬಂತೆಂದು ಸೂರ್ಯನೂ ಗತಿ ಬದಲಿಸಿದ್ದಾನೆ....ಹತ್ತು ಸಂಕ್ರಮಣ ಕಳೆದರೂಎಗ್ಗಿಲ್ಲದೆ, ಬಾಗದೇ ನಡೆದಿದೆ ಒಲವು....ಈ ಪ್ರೀತಿ ನಿರಂತರಕೆಂಡಸಂಪಿಗೆ....
ಗೆಳತೀ...,ಆಕಾಶದಲ್ಲಿ ನಕ್ಷತ್ರಗಳೆಷ್ಟಿವೆಯೋಗೊತ್ತಿಲ್ಲ...ಆದರೆ...ಎಷ್ಟಿರಬೇಕಿತ್ತೋ ಅದಕ್ಕಿಂತ ಎರಡು ಕಮ್ಮಿಯಿದೆ...ಮತ್ತು...ಆ ಎರಡೂ ನಿನ್ನಕಂಗಳಲ್ಲಿವೆ....!!. . . . . . ಸಖ್ಯಮೇಧ
ಬಿಂಕದಲಿ ನಿಂತಿತ್ತು ಆ ಕೆಂಡಸಂಪಿಗೆಅದ ಕಂಡು ಮನದಲ್ಲಿ ನೆನಪುಗಳ ಮೆರವಣಿಗೆ...ಹೂವಲ್ಲೂ, ಘಮದಲ್ಲೂ ಅವಳದ್ದೇ ನೆನಪು...ಹೂವಲ್ಲೂ ಅವಳ ಮೊಗ ಅರಳುವುದೇ ಒನಪು....ಗೆಳತೀ...ಕತ್ತಲೆಯು ಏರುತಿರೆನಿನ್ನ ನಗೆಯಾ ಹೂವುಅರಳುತಿರೆ- ನನಗಾಗಮತ್ತೆ ಮುಂಜಾವು...!.…
ಗೆಳತೀ ...ನನ್ನಅಚ್ಚುಮೆಚ್ಚಿನಕವನ ಸಂಕಲನಬಿಡುಗಡೆಯಾದದ್ದುನೀ ಹುಟ್ಟಿದದಿನದಂದೇ.....!. . . . . ಸಖ್ಯಮೇಧ
ಗೆಳತೀ ...ಕೊಳವೆಂಬ ತಟ್ಟೆಯಲ್ಲಿಚಂದ್ರನೆಂಬ ಕರ್ಪೂರ.....ನಮ್ಮ ಪ್ರೀತಿಗೆ ಶುಭಕೋರುವಮಂಗಳ ನೀರಾಜನ...!. . . . . ಸಖ್ಯಮೇಧ
ನಿಜ ಹೇಳು ಗೆಳತೀ...,.ಏಲಿಯನ್ನುಗಳು ಬಂದಿದ್ದವಲ್ಲವೇ....?!.ನಿನ್ನ ಕಂಗಳಲ್ಲಿ ನಕ್ಷತ್ರವಿಟ್ಟು ಹೋಗಲು....!?# ಸುಮ್ಮನೇ. . . . . . ಸಖ್ಯಮೇಧ
ಈ websiteನಲ್ಲಿ cookies ಬಳಸಲಾಗುತ್ತದೆ.