X

Uncategorized

ಗುರು

ಮೊರೆವ ತೊರೆಯರೆದೂರ ಸಾರಲು-  ತೊರೆದು ನೊರೆಹೊರೆಯೊಡಲ ಕಡಲು ಮರಳಿ ಸೇರಿತು ತನ್ನ ಗೂಡಿಗೆ;  ನೀ- ತೆರಳುವೆಂದಿಗೆ ಗುರುವಿನಡಿಗೆ? ನೀಲಬಾನಲಿ ತೇಲುಮುಗಿಲದು  ಸಾಲುಸಾಲಿನ ಮಳೆಯ ಸುರಿಸಿ; ಜಲವು ಸೇರಿತು…

‪‎ಪಾಪು‬

ನೊಸಲಿನೆಸಳಿನ ಮೇಲೆ ಪಸುಳೆವಿಸಿಲದು ಹೊಮ್ಮಿ ಹಸುಳೆಯಿವಳೀ ಹೆರಳು ಹರಳಕಾಂತಿಯ ಚಿಮ್ಮಿ ಹಸಿತುಷಾರದ ಸಾರ ಸರಸರನೆ ಪಸರಿಸಿದೆ ಹೆಸರಿರದ ಹೊಸಬೆಳಕು ಕಿರುಗಣ್ಣಲೊಸರಿದೆ . . . . .…

‎ಕೆಂಡಸಂಪಿಗೆ‬

ಬಲುಮುದ್ದು ಅವಳದ್ದು ಬಿಳಿಯದ್ದು ಕೆನ್ನೆ; ಗುಳಿಬಿದ್ದು ನಗುತಿದ್ದರದು ಮುದ್ದೆ ಬೆಣ್ಣೆ! ಬಳಿಯಿದ್ದು ನೋಡಿದ್ದೆ- ತಿಳಿದಿದ್ದೇ ನಿನ್ನೆ- ನಾಚಿದ್ದ ಅವಳದ್ದು ಚಿನ್ನದ್ದು ಕೆನ್ನೆ! . . . .…

‎ಸುಂದರಿ‬

ಸುಮಸಮ ಅನುಪಮೆ, ಒಲುಮೆಯ ಚಿಲುಮೆ; ಸುಂದರಿ ಶಮೆ, ರಮೆ, ಸೌಂದರ್ಯ ಸೀಮೆ! ಸು-ಕುಸುಮ ಕೋಮಲೆ, ಚಂಚಲೆ! ಭಲೆ ಭಲೆ! ನೀ ನಗುವಿನ ಅಲೆ! ಸನಿಹಕೆ ಬರಲೇ?! .…

‪ಕೆಂಡಸಂಪಿಗೆ‬

  'ಅವಳ' ಮನೆಕಡೆ ಬಾಗತೊಡಗಿವೆ ಕೆಂಡಸಂಪಿಗೆ ಮರಗಳು; ಅವಳ ಉಸಿರನು ತಾವು ಉಸಿರಿಸಿ ಹೆಚ್ಚು ಕಂಪನು ಪಡೆಯಲು! . ನನ್ನ ಊರಿನ ಕೆಂಡಸಂಪಿಗೆ ಹೆಚ್ಚು ಬಣ್ಣವ ಸೂಸಿದೆ;…

‪ಕೋರಿಕೆ‬

ಸೊಲ್ಲವಲ್ಲಿಗಳೆಲ್ಲೆಯಿಲ್ಲದೆಯೆ ಹೊರಬರಲಿ- ಬೆಲ್ಲಮೆಲ್ಲುವ ಸಿಹಿಯ ಓದುಗನಿಗೀದು! ಮೆಲ್ಲನುಲ್ಲಾಸದಲಿ ಬರೆದೆಲ್ಲ ಸಾಲುಗಳು ಸಲ್ಲುತಲಿ ಬಲ್ಲವರ ಮನಗೆಲ್ಲುವಂತೆ! . . . . . ಕವನತನಯ ಸಖ್ಯಮೇಧ

ಕೆಂಡಸಂಪಿಗೆ‬

ಕೆಂಬಾನು ಮುಸಿನಗಲು ಮುಸ್ಸಂಜೆ ಮುಸುಕಿಹುದು- ಮುಸಲ ಧಾರೆಯ ಬದಲು ಬಿಸಿಲ ಧಾರೆಯ ಸುರಿಸಿ!; ಮಸುಕಾಗಿಹುದು ಮನಸು- ಮಾಸಿದಾಗಸದಂತೇ; ಹುಸಿಮುನಿಸು ತೋರುವವಳೊಡನೆ ಇರದೇನೇ . ಈ ಒಂಟಿ ಸಂಜೆಯೆಂಬುದು…

ಭಾರತಿ

ಮೂರ್ತರೂಪಳು ಆರ್ತರೆದೆಯಲಿ ಕೀರ್ತಿರೂಪಳು ಪೂರ್ತಿ ಜಗದಲಿ ಪ್ರಾರ್ಥಿಸಿದವಗೆ ಭರ್ತಿಫಲವನು ಸ್ವಾರ್ಥವಿಲ್ಲದೆ ನೀಡುವವಳು

ಕೆಂಡಸಂಪಿಗೆ‬

ಕೆಂಡಸಂಪಿಗೆ ಘಮಲು -ಉಂಡ ತಂಪಿಗೆ ಅಮಲು ತುಂಡು ಚಂದ್ರಗೂ ಮರುಳು - ಕಂಡು ಓಡಿದ ಹಗಲು ದುಂಡುಕಂಗಳ ಹುಡುಗಿ ಮಂಡಿಯೂರಿದಳಿಲ್ಲಿ ಬಂಡೆಯಂತಹ ಮನವ ಬೆಂಡಾಗಿಸಿದಳಿಲ್ಲಿ.. . ‪#‎ಕೆಂಡಸಂಪಿಗೆ‬

ಚುಂಬನ

ತುಂಬಿರುಳು ಚುಂಬನದ ಹಂಬಲವು ತುಂಬಿರಲು ಬೆಂಬಿಡದ ತುಟಿಬಂಧ ಹೊಂಬೆಳಗವರೆಗೂ ಕುಂಭದುಂಬುವ ಜೇನು ಚೆಂದುಟಿಗಳಲ್ಲಿ ಇಂಬು ಸಿಕ್ಕಿದೆ ಸುಖಕೆ ಎಳೆಬಾಹುಗಳಲಿ . ಕನಕನಖ ಕೆಣಕುತಿದೆ ಗೀಚುತಲಿ ಬೆನ್ನ ಕಣಕಣವೂ…

ಈ websiteನಲ್ಲಿ cookies ಬಳಸಲಾಗುತ್ತದೆ.