ಈ ಬರಹಗಳ ಬಡ ಶಿಲ್ಪಿ ಬಗ್ಗೆ

 

ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಈಗ ವಾಸ್ತವ್ಯ ಗೋವಾದಲ್ಲಿ. ಬೆನ್ನ ತುಂಬ ಕನಸ ಮೂಟೆ ಹೊತ್ತಿದ್ದ ಬಾಲ್ಯ ಮುಗಿದು ಈಗ ನೀರಸ ಬದುಕು ಸಾಗ್ತಾ ಇದೆ. ಸಾಧಿಸಿದ್ದು ಏನೂ ಇಲ್ಲ. ದಕ್ಕಿದ ಸ್ನೇಹ ಮತ್ತು ಪ್ರೀತಿಗಳು ಆ ಜೀವಗಳ ಅಪಾರ ಕೃಪೆಯೇ ಹೊರತು ನನ್ನ ಸಾಧನೆ ಅಲ್ಲ. ಜೀವನದಲ್ಲಿ ಪಡೆದದ್ದಕ್ಕಿಂತ ಕಳೆದುಕೊಂಡದ್ದೆ ಹೆಚ್ಚು. ಭವಿಷ್ಯದ ಕನಸಿಗಿಂತ ಭೂತದ ನೆನಪುಗಳೇ ಹೆಚ್ಚು ಆಪ್ಯಾಯಮಾನ ನನಗೆ… ಭಾವಜೀವಿ.. ತೀರಾ ವಿಚಿತ್ರ ಕ್ಷುಲ್ಲಕ ವಿಷಯಗಳನ್ನು ಪ್ರಾಣದಂತೆ ಪ್ರೀತಿಸಿಬಿಡುತ್ತೇನೆ…. ಮಲೆನಾಡು, ಹಾಡು, ಹೆಣ್ಣು, ಬರಹ ಎಲ್ಲದರ ಮೇಲೆ ಗೌರವಪೂರ್ವಕ ಪ್ರೀತಿ… ಕಣ್ಣಾರೆ ಕಂಡವರ ಕಣ್ಣಲ್ಲಿ ಬೇಜವಾಬ್ದಾರಿ ವಿಚಿತ್ರ ಮನುಶ್ಯ. ನೀವು ನನ್ನ ಭೇಟಿ ಮಾಡಿದಾಗ ವೈಯಕ್ತಿಕ ವಿಚಾರ ಯಾವುದನ್ನೂ ಕೇಳದೆ ಇರುವುದೇ ಕ್ಷೇಮ.

ಸಾಕು ಬಿಡಿ. ನನ್ನ ದೃಷ್ಟಿಕೋನದಲ್ಲಿ ನಾನು ಯಾವತ್ತೂ ಸುಭಗನೇ…

ಫೇಸ್ ಬುಕ್ಕು  https://facebook.com/kavanatanaya

E mail:  [email protected]

Phone : 7040618439

ಕೆಂಡಸಂಪಿಗೆ

ಈ ಪೋಸ್ಟ್ ಅನ್ನು ಶೇರ್ ಮಾಡಲು: