ಚಂದ್ರದರ್ಶನವಾದ ಕ್ಷಣದಲಿ
ನಿನ್ನ ನೆನಪಿನ ಸುರಿಮಳೆ ;
ನಿನ್ನ ಕಂಗಳ ತಿಂಗಳಲಿ ತಂ-
ಪಾಯಿತೆನ್ನೆದೆ, ಕೋಮಲೆ !
ಬೆಸೆದ ಕಂಗಳ ಭದ್ರ ಸೇತುವೆ
ಮೇಲೆ ಪ್ರಿಯಸಂವಾದವು |
ಪ್ರೇಮವೆಂಬೀ ವಿಶ್ವಭಾಷೆಗೆ
ಯಾಕೆ ಬೇಕನುವಾದವು ?!
ಜಾರುತಿದೆ ಹದಿಹರೆಯದೀ ಎದೆ
ಮುಗುದೆ, ನಿನ್ನನೆ ನೆನೆದಿದೆ |
ಹೃದಯ ಕಂಪಿಸಿ ಬಯಕೆಯುದಿಸಿದೆ
ಸಂ(ಅಂ)ಗ ಸುಖವನು ಬಯಸಿದೆ ||