ಕೆಂಡಸಂಪಿಗೆ

#‎ಪುರಾ_ನಾರೀ_ಪ್ರೇಮಧಾರೀ‬
ಕುಳಿರುಗಾಳಿಯ ತಂಪು ದನಿಯಲಿ
ಹೃದ್ಯವಾಗಿದೆ ಅವಳ ಪದ್ಯವು
ನೀರಧಾರೆಯ ಮಂದ ನಾಟ್ಯದಿ
ನಿತ್ಯ ಕಂಡಿದೆ ಅವಳ ನೃತ್ಯವು…..

ತೂಗುತಿಹ ಹೆಜ್ಜೇನ ಹಿಂಡು
ನಾಚಿಕೊಂಡಿದೆ ಅಧರ ಕಂಡು
ಶಿಶಿರಕಾಲದ ತುಂಬು ಚಂದ್ರನ
ಮರೆಯಮಾಡಿದೆ ಹಣೆಯ ಚಂದನ….

ಸಾಲು ಶ್ರೇಣಿಯ ರಜತ ಪರ್ವತ-
ದಂತೆ ಕಂಡಿದೆ ದಂತ ಪಂಕ್ತಿಯು
ಕಿವಿಯ ಲೋಲಕ ಬಹಳ ಮೋಹಕ
ಮನದಿ ಹೊಮ್ಮಿದೆ ಭಾವ ಸೂಕ್ತಿಯು….

‪ಕೆಂಡಸಂಪಿಗೆ‬ ನಕ್ಕ ವೇಳೆಗೆ
ಮಿಕ್ಕ ಹೂಗಳು ಪಕ್ಕ ಸರಿದವು
ಚಿಕ್ಕ ಹೃದಯದಿ ಪುಕ್ಕ ಪಡೆಯಿತು
ಪ್ರೇಮಹಕ್ಕಿಯು ನಕ್ಕು ನಲಿಯಿತು…
#ಕೆಂಡಸಂಪಿಗೆ

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *