ಕವನ ರಸಾಯನ ಪಾನ

ಎನಿತೊ ನೆಪದಲಿ ಇನಿತು ಗೀಚಲು
ಕವನಕುಸುಮದ ವಿರಚನೆ
ಬರೆದ ಸಾಲಲಿ ತಳೆದ ಮನದುಲಿ
ಕಹಿಯ ನೆನಪ ವಿಮೋಚನೆ

ಖುಷಿಗೆ ದುಃಖಕೆ ಕನಸು ಮುನಿಸಿಗೆ
ಹೂಹುಡುಗಿ ಸವಿ ನೆನಪಿಗೆ
ಬದುಕಲೆಲ್ಲಕು ಜೊತೆಯು ಅಕ್ಷರ
ಅದುವೆ ಇರದಿರೆ ನಶ್ವರ

ಕವನ ಕನಕವ ತುಂಬಿಕೊಳ್ಳಲು
ತುಂಬಿತೆದೆಯಾ ಜೋಳಿಗೆ
ಹೃದಯಮಧ್ಯದಿ ಪದ್ಯವಿದ್ದಿರೆ
ಖುಷಿಯೆ ಕಾದಿದೆ ನಾಳೆಗೆ

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:
 1. ನಿನ್ನ ಜೋಳಿಗೆಯ ಪದ ಮೊರೆತರೆ
  ನನ್ನೊಳಗೆ ಸಗ್ಗದ ನೆಲೆವಿಡು
  ನೀನು ಇನಿತಿನಿತು ಗೀಚುತಿರೆ
  ನನಗದುವೆ ವಿಶ್ವಕವಿಯ ಹಾಡು..

 2. ನಿಮ್ಮ ಬೆಂಬಲ ನುಡಿಯ ಸಿಂಚನ
  ಬೊಗಸೆ ತುಂಬುವ ಕಾಂಚನ
  ನಿಮ್ಮ ಅಭಿಮಾನವದು ಕಾರಣ
  ಬರೆಯಲೀಪರಿಯ ಕವನ