Posted on April 16, 2017 by ಕವನತನಯಕೆಂಡಸಂಪಿಗೆ #ಕೆಂಡಸಂಪಿಗೆ ಸೌಂದರ್ಯ ನಿನ್ನ ಕಾಲಾಳು ಚಿನ್ನ ಮಾಧುರ್ಯ ನಿನ್ನ ಸ್ವತ್ತು ಚಾತುರ್ಯ ನಿನ್ನ ಆಂತರ್ಯವನ್ನ ತುಂಬಿಹುದು ಎಲ್ಲ ಹೊತ್ತು ಇಂಚರದ ಮಾತು, ಮಿಂಚಿರುವ ಕಣ್ಣು ಗೊಂಚಲಾಗಿಳಿದ ಹೆರಳು ಚಂಚಲತೆ ಒಳಗೆ, ಅಂಚಿನಲಿ ಬೆರಗೆ ತುಂಬಿರುವ ವದನದವಳು ಕವನತನಯ ಈ ಪೋಸ್ಟ್ ಅನ್ನು ಶೇರ್ ಮಾಡಲು: