ಅತ್ಯಂತ ಸಮೀಪದ ನಕ್ಷತ್ರಗಳು.,..
.
ಅವಳೆರಡು ಕಂಗಳು.!!
. . . . . ಸಖ್ಯಮೇಧ
ಇದು ಭಾವಾಲಾಪಗಳ ಸುರಿಮಳೆ
ಕೆಂಡಸಂಪಿಗೆ – ಮಾಧುರ್ಯದ ಕವಿತೆಗಳು….
ಕೆಂಡಸಂಪಿಗೆ ಬೇಕೆಂದು ನನ್ನವಳ ಹಟ…
ಈಗೆಲ್ಲಿ ಸಿಕ್ಕೀತು?! ಇದೊಳ್ಳೇ ಸಂಕಟ..
.
ಅವಳ ಮೊಗದಾ ಮುಂದೆ ಕನ್ನಡಿಯ ಹಿಡಿದೆ…
“ನೋಡು ಇವಳೇನೆ ಕೆಂಡಸಂಪಿಗೆ ” ಎಂದೆ…
.
ನಾಚಿ ನಕ್ಕವಳ ಕೆನ್ನೆ ಕೆಂಪು ಕೆಂಪು…
ಅವಳ ನಗುವನು ನೋಡಿ ನನ್ನೆದೆಯೂ ತಂಪು…
. . . . . . . . ಸಖ್ಯಮೇಧ
ನಾನವಳ “ಕೆಂಡಸಂಪಿಗೇ“…..” ಎಂದು ಕರೆದೆ…
ಅವಳೆಂದಳು-
“ನಿನಗೆ ನನಗಿಂತ ಕೆಂಡಸಂಪಿಗೆ ಮೇಲೇ ಹೆಚ್ಚು ಪ್ರೀತಿ :/ “
. . . . . ಸಖ್ಯಮೇಧ
ಗೆಳತೀ ,
ನಾ ನಿನಗೆ “ಕೆಂಡಸಂಪಿಗೆಯಂಥವಳು”
ಅಂತ ಹೇಳೋಲ್ಲ ಬಿಡು….
.
ಆಮೇಲೆ ಹೊಗಳಿಕೆಗೆ ನಾಚಿ ಕೆಂಡಸಂಪಿಗೆ
ಇನ್ನಷ್ಟು ಕೆಂಪಗಾಗಿಬಿಟ್ಟೀತು…!
–ಸಖ್ಯಮೇಧ
ಹುಡುಗೀ…
ನಾನು ನಿನ್ನನ್ನು
“ಕೆಂಡಸಂಪಿಗೆಯಂಥವಳು”
ಅಂದಿದ್ದೇನೋ ನಿಜ….
ಆದರೆ ನೀನು
“ಹುಡುಗರು ಹೂವು ಬೇಡಬಾರದು”
ಅಂದಿದ್ದು ಯಾಕೆ….
ಮುತ್ತು ಬೆಳಕನ್ನು ಹೊರಡಿಸಬಲ್ಲದು….
.
.
.
.
ಅವಳ ಕೆನ್ನೆ ಮೇಲಿಟ್ಟಾಗ; ಅವಳ ಕಂಗಳಿಂದ
. . . . ಸಖ್ಯಮೇಧ