ಬಡ್ಡೇಗೆ ಬರೆದಿದ್ದು…

“ನಗುವಾ ನಲಿವಾ ಓ ಕೆಂಡಸಂಪಿಗೆ
ನನಗೆ ಹದಿನೆಂಟು, ನಿನಗೆಷ್ಟೇ ಪ್ರಾಯ..?”
.
“ಹೇಳುವೆನು ಕೇಳು ಓ ಪ್ರಿಯತಮ…
ಹೂವಿಗೊಂದು ದಿವಸ; ಕಂಪಿಗೆ ಸಹಸ್ರಮಾನ…!”

. . . . ಸಖ್ಯಮೇಧ

ಕೆಂಪು ಸಂಪಿ

ಕೆಂಡಸಂಪಿಗೆ ಬೇಕೆಂದು ನನ್ನವಳ ಹಟ…
ಈಗೆಲ್ಲಿ ಸಿಕ್ಕೀತು?! ಇದೊಳ್ಳೇ ಸಂಕಟ..
.
ಅವಳ ಮೊಗದಾ ಮುಂದೆ ಕನ್ನಡಿಯ ಹಿಡಿದೆ…
“ನೋಡು ಇವಳೇನೆ ಕೆಂಡಸಂಪಿಗೆ ” ಎಂದೆ…
.
ನಾಚಿ ನಕ್ಕವಳ ಕೆನ್ನೆ ಕೆಂಪು ಕೆಂಪು…
ಅವಳ ನಗುವನು ನೋಡಿ ನನ್ನೆದೆಯೂ ತಂಪು…
. . . . . . . . ಸಖ್ಯಮೇಧ